Saturday, July 12, 2008

ನನಗೂ ನಿನಗೂ ಕಣ್ಣಲ್ಲೇ ಪರಿಚಯ



ನನಗೆ ಇತ್ತೀಚೆಗೆ ತುಂಬಾ ಇಷ್ಟ ಆದ ಹಾಡು ಇದು, ಅರಮನೆ ಚಿತ್ರದ ಈ ಹಾಡನ್ನು ಜಯಂತ್ ಕಾಯ್ಕಿಣಿ ಅವರು ರಚಿಸಿದ್ದಾರೆ. ಕುನಾಲ್ ಗಾಂಜವಾಲರ ಧ್ವನಿಯಲ್ಲಿನ ಈ ಹಾಡಿಗೆ ಗುರುಕಿರಣ್ ಅವರು ಸಂಗೀತ ನೀಡಿದ್ದಾರೆ.


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ


ನಲುಮೆ ಸ್ನೇಹದ ನವಿರಾದ ಗ್ರಂಥವೆ

ಪುಟವಾ ತೆರೆಯುವಾ ಹಿತವಾದ ಗಂಧವೆ

ಮೊದಲಾ ನುಡಿಯಲೀ ನಾನೀಗ ತನ್ಮಯ

ಇನ್ನೂ ಕಥೆಯಲಿ ನೀನನ್ನಾ ಕರೆದೆಯಾ


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ


ಮೊದಲಾ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ

ಮೃದುಲಾ ಭಾವದೀ ನನ್ನೊಂದು ಕೋರಿಕೆ

ಎಲ್ಲಾ ತಿಳಿದರೂ ಯಾಕಿನ್ನೂ ಅಭಿನಯ

ವಿರಹಾ ಬಂದಿದೆ ಒಲವಿನ್ನೂ ನಿಶ್ಚಯ


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ

3 comments:

ತೇಜಸ್ವಿನಿ ಹೆಗಡೆ said...

ಹಾಡು ತುಂಬಾ ಚೆನ್ನಾಗಿದೆ.. ಒಂದೆರಡು ಸಲ ಕೇಳಿರುವೆ. ಹಾಡಿನ ಭಾವಾರ್ಥವೂ ಸುಂದರವಾಗಿದೆ.

ರಾಜೇಶ್ ನಾಯ್ಕ said...

ಶರಶ್ಚಂದ್ರ,
ಏನು ಕಾಕತಾಳೀಯವೋ ನೋಡಿ. ನಿಮ್ಮ ಈ ಪೋಸ್ಟ್ ಓದುತ್ತಿರುವಾಗ ನಾನು ಇದೇ ಹಾಡನ್ನು ಕೇಳುತ್ತಿರಬೇಕೆ...?

shivu.k said...

ಶರತ್ ಈ ನನಗೂ ಹಾಡೂ ತುಂಭಾ ಇಷ್ಟ ತುಂಬಾ ಭಾವಪೂರಕವೂ ಆಗಿದೆ. ಇದೇ ಸಿನಿಮಾದಲ್ಲಿ ಕ್ಷಮಿಸಿಬಿಡು ಅಂತ ಮತ್ತೊಂದು ಹಾಡು ಇದೆ ಅದನ್ನೊಮ್ಮೆ ಏಕಾಂತದಲ್ಲಿ ಕೇಳಿ ತುಂಬಾ ಇಷ್ಟವಾಗುತ್ತೆ.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

ಮತ್ತೊಂದು ವಿಚಾರ:
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿನ ವಿಳಾಸ:
http://camerahindhe.blogspot.com/