Tuesday, September 23, 2008

ಹೆಸರಿಲ್ಲದ ಒಂದು ಚಿತ್ರ


ಈ ಚಿತ್ರ ಬಿಡಿಸಿ ಬಹಳ ದಿನಗಳಾದರೂ ಪೋಸ್ಟ್ ಮಾಡಲು ಆಗಿರಲಿಲ್ಲ. ಕೆಲವೊಮ್ಮೆ ಸೋಮಾರಿತನ, ಕೆಲವೊಮ್ಮೆ 'ಮೂಡ್' ಇಲ್ಲದಿರುವುದು, ಕೆಲವೊಮ್ಮೆ ನಿಜವಾಗಲೂ ಸಮಯ ಸಿಗದಿರುವುದರ ನಡುವೆ ಚಿತ್ರ ಇನ್ನೇನು ಮೂಲೆ ಸೇರುವುದರಲ್ಲಿತ್ತು. ಇವತ್ತು ಅಂತು ಇಂತೂ ಟೈಮ್ ಸಿಕ್ಕಿ ಪೋಸ್ಟ್ ಮಾಡ್ತಾ ಇದ್ದೇನೆ :)

13 comments:

ಸಿಮ್ಮಾ said...

ಹೇಗೆ ಬಂತು ಮಾರಾಯ್ರೆ ನಿಮ್ಮ ತಲೆಯಲ್ಲಿ ಈ ಕಲ್ಪನೆ!! wonderful! keep it up!

ಮನಸ್ವಿ said...

ಎಂತಾ ಕಲ್ಪನೆ ಅದ್ಬುತ,ಮುದ್ದಾದ ಮಗು ಮುಖ, ಸುಂದರ ಚಿತ್ರ,ಆಮೇಲೆ ಸುಮಾರು ದಿನದಿಂದ ಕೇಳಕ್ಕು ಅನ್ಕಂಡಿದ್ದಿ, ನೀನು ಬರೀ ಬ್ಲಾಕ್ ಅಂಡ್ ವೈಟ್ ಚಿತ್ರ ಮಾತ್ರ ಬಿಡ್ಸದ?, ಒಂದು ಕಲರ್ ಫುಲ್ ಚಿತ್ರ ಬಿಡ್ಸೋ ಮಾರಾಯ. ಟೈಮ್ ಇಲ್ಲೇ ಅಂತ ಇಂತ ಒಳ್ಳೆ ಚಿತ್ರ ಬಿಡ್ಸ್ಕ್ಯಂದು ಮೂಲೆಗೆ ಒಗ್ಯಕ್ಕೆ ಹೋಗಿದ್ದೆ ಅಂದ್ರೆ ಎಂತಾ ಜನ!

ರಾಜೇಶ್ ನಾಯ್ಕ said...

ಸೂಪರ್ ಕಲ್ಪನೆ. ಮೊದಲೇ ಪೋಸ್ಟ್ ಮಾಡದಿರುವುದಕ್ಕೆ ನಿಮಗೆ ಸ್ವಲ್ಪ ಧಿಕಾರವಿರಲಿ ಎನ್ನುತ್ತಾ ಈ ಚಿತ್ರವನ್ನು ಬಹಳ ಇಷ್ಟಪಟ್ಟೆ ಎಂದು ಹೇಳಬಯಸುತ್ತೇನೆ.

ಸುಶ್ರುತ ದೊಡ್ಡೇರಿ said...

:) ಚನಾಗಿದ್ದು.

ಶರಶ್ಚಂದ್ರ ಕಲ್ಮನೆ said...

ಧನ್ಯವಾದಗಳು ಸಿಮ್ಮ ಅವ್ರೆ ನನ್ನ ಬ್ಲಾಗ್ ಗೆ ಭೇಟಿ ಕೊಟ್ಟು ಕಾಮೆಂಟಿಸಿದ್ದಕ್ಕೆ. ಈ ಚಿತ್ರ ನನ್ನ ಕಲ್ಪನೆಯದ್ದಲ್ಲ. ಇದು ಒಂದು reference ಇಟ್ಕೊಂಡು ಬಿಡಿಸಿದ್ದು. ನನ್ನ ಕಲ್ಪನೆಯ ಚಿತ್ರಗಳು ನನ್ನ ಕಾಲೇಜ್ ನೋಟ್ ಪುಸ್ತಕಗಳಿಗೆ ಅಸ್ಟೆ ಸೀಮಿತವಾಗಿದೆ. ನೋಡೋಣ ಮುಂದೆಂದಾದರೂ ಇಲ್ಲಿಗೆ ಬಂದರೂ ಬರಬಹುದು.


ಆದಿತ್ಯ,
ಬಾಲ್ಯದಲ್ಲಿ ಬಣ್ಣದ ಹುಚ್ಚು ಇತ್ತು. ಈಗ ಬರಿ ಪೆನ್ಸಿಲ್ ಹಾಗು ಚಾರ್ ಕೋಲ್ ಕಡೆ ಜಾಸ್ತಿ concentrate ಮಾಡ್ತಿದ್ದಿ. ಇದು ಬರಿ ಹವ್ಯಾಸ ಆದ್ರಿಂದ ಅಸ್ಟೊಂದು ಸೀರಿಯಸ್ ಆಗಿ ಬಿಡಿಸ್ತಾ ಇಲ್ಲೇ.ರಾಜೇಶ್ ಅವ್ರೆ,

ಧನ್ಯವಾದಗಳು, ಇನ್ನು ಮುಂದೆ ನಿಮ್ಮ ಧಿಕ್ಕಾರ ಬರುವ ಮೊದಲೇ ಪೋಸ್ಟ್ ಮಾಡ್ತೀನಿ :)ಸುಶ್ರುತ,

ಧನ್ಯವಾದಗಳು. ಬಹಳ ದಿನ ಅದಮೇಲೆ ನನ್ನ ಬ್ಲಾಗ್ ಕಡೆಗೆ ಕಣ್ಣು ಹಾಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮಂತ ಬ್ಲಾಗಿಗರ ಪ್ರೋತ್ಸಾಹ ಬೇಕು ನಮಗೆ. ಈ ಕಡೆ ಬರ್ತಾ ಇರು ಆಗಾಗ :)

ಸುಧನ್ವಾ said...

ಈ ಚಿತ್ರ ನಿಧಾನವಾಗಿ ಪ್ರಕಟವಾದ್ದರಲ್ಲಿ ಆಶ್ಚರ್ಯ ಇಲ್ಲ ! ಚೆನ್ನಾಗಿದೆ, ಹೊಸತಾಗಿದೆ.

ವೈಶಾಲಿ said...

ತುಂಬ ಚಂದದ ಚಿತ್ರ....keep it up!

shivu K said...

ಶರತ್ ಚಂದ್ರರವರೇ .
ಎಷ್ಟು ಚೆನ್ನಾಗಿದೆರೀ ನಿಮ್ಮ ಕಲ್ಪನೆ! ಗ್ರೇಟ್! ನಾನು ಫೊಟೊಗ್ರಾಫರ್ ಆಗಿದ್ದಿನಾದ್ದರಿಂದ ನಿಮ್ಮ ಕಾನ್ಸೆಪ್ಟನ್ನು ನಾನೂ enjoy ಮಾಡ್ತೀನಿ.. ಇನ್ನೂ ಇಂತವು ಬರುತ್ತಿರಲಿ. ಕತೆ ಕವನಗಳಿಗಿಂತ ಇಂಥ ಹೊಸತೇನಾದ್ರು ಇದ್ರೆ ಬ್ಲಾಗ್ ಲೋಕಕ್ಕೆ ಚೆನ್ನ!
ನಾನು ಈ ಬ್ಲಾಗ್ ಪ್ರಪಂಚಕ್ಕೆ ಹೊಸ ಸದಸ್ಯ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ನಿಮಗಿಷ್ಟವಾದ ಛಾಯಾಚಿತ್ರಗಳು ಮತ್ತು ಅದಕ್ಕೆ ಪೂರಕವಾದ ಬರವಣಿಗೆಗಳು ಸಿಗಬಹುದೆಂದುಕೊಳ್ಳುತ್ತೇನೆ. ಬನ್ನಿ.
ನೋಡಿ ಸಂತೋಷವಾದರೆ ಒಂದು ಖುಶಿಯ ಮಾತು ಪ್ರತಿಕ್ರಿಯಿಸಿ.

ಶಿವು.ಕೆ

ತೇಜಸ್ವಿನಿ ಹೆಗಡೆ- said...

Excellent! Liked it very much :)

ಶರಶ್ಚಂದ್ರ ಕಲ್ಮನೆ said...

ಇಲ್ಲಿ ಕಾಮೆಂಟಿಸಿದ ಎಲ್ಲರಿಗೂ ಇನ್ನೊಮ್ಮೆ ಹೇಳಲಿಚ್ಚಿಸುವ ವಿಷಯವೇನೆಂದರೆ ಈ ಚಿತ್ರ ನನ್ನ ಕಲ್ಪನೆಯದ್ದಲ್ಲ. ಕಲ್ಪಿಸಿಕೊಂಡು ಇಷ್ಟೊಂದು ಚನ್ನಾಗಿ ಚಿತ್ರಿಸುವಸ್ಟು ಒಳ್ಳೆಯ ಕಲಾಕಾರ ನಾನಲ್ಲ. ಇದೊಂದು ಹವ್ಯಾಸವಷ್ಟೇ ನನಗೆ.

ಸುಧನ್ವ ಅವ್ರೆ,
ಧನ್ಯವಾದಗಳು ನನ್ನ ಬ್ಲಾಗ್ಗಿಗೆ ಭೇಟಿ ಕೊಟ್ಟಿದ್ದಕ್ಕೆ. :)

ವೈಶಾಲಿ ಅವ್ರೆ,
ನಿಮಗೂ ಧನ್ಯವಾದಗಳು ಚಿತ್ರವನ್ನು ನೋಡಿ ಪ್ರೋತ್ಸಾಹಿಸಿದ್ದಕ್ಕೆ :)


ಶಿವೂ ಅವ್ರೆ,
ಧನ್ಯವಾದಗಳು ಇಲ್ಲಿಗೆ ಭೇಟಿ ನೀಡಿದ್ದಕ್ಕೆ. ನೀವು ಛಾಯಾಚಿತ್ರಕಾರರು ಎಂಬುದನ್ನು ತಿಳಿದು ಸಂತೋಷವಾಯಿತು, ನನಗೂ ಫೋಟೋಗ್ರಫಿ ಲಿ ಆಸಕ್ತಿ ಇದೆ. ನಿಮ್ಮಿಂದ ಮಾರ್ಗದರ್ಶನ ದೊರೆಯಬಹುದು ಎಂದು ಆಶಿಸುತ್ತೇನೆ.


ತೇಜಸ್ವಿನಿ ಅಕ್ಕ,
ಚಿತ್ರ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ತುಂಬ ದಿನ ಆತು ಈ ಕಡೆ ಭೇಟಿ ಕೊಡದೆ :)

Seema Hegde said...

ಶರಶ್ಚಂದ್ರ,
ಎಲ್ಲ post ಗಳ ಜೊತೆಗೆ ಇದಂತೂ ತುಂಬಾನೆ ಇಷ್ಟ ಆತು.
ಹಾಗೆ jeans pant ಕಥೆ ಕೂಡ ಚೆನ್ನಾಗಿದ್ದು.
ಕಲ್ಪನೆಗೆ ಕೊನೆ ಇಲ್ಲ....keep going.

~rAGU said...

bahala channagide

~rAGU said...

ತು೦ಬಾ ಚೆನ್ನಾಗಿದೆ. ಹಾಡುವ ಪ್ರಯತ್ನಮಾಡಿಲ್ಲವೇ?