
ಕಳೆದ ಭಾನುವಾರ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಬರಲಿ ಎಂದು ಜಪಿಸುತ್ತ ಕುಳಿತಿದ್ದೆ. ಮಳೆಯೇನೋ ಬಂತು ಆದರೆ ಪಂದ್ಯ ನಿಲ್ಲುವಷ್ಟು ಬರ್ಲಿಲ್ಲ. ನಿಮಗೆ ಆಶ್ಚರ್ಯ ಆಗಬಹುದು ಎಲ್ಲರು ಪಂದ್ಯ ನಡೆಯಲಿ ಎಂದು ಕಾಯುತ್ತಿದ್ದಾರೆ ಇವನು ಮಳೆ ಬರಲಿ ಎಂದು ಕಾಯುತ್ತಿದ್ದಾನೆ ಎಂದು. ಅದಕ್ಕೆ ಒಂದು ಕಾರಣವಿದೆ. ನಾನು ಕ್ರಿಕೆಟ್ ಪ್ರೇಮಿಯೇ, ಆದರೆ ಇಡಿ ರಾಜ್ಯ ವಿದ್ಯುತ್ ಕೊರತೆ ಎದುರಿಸಿತ್ತಿರುವಾಗ ಇಲ್ಲಿ ಕೇವಲ ಮನೋರಂಜನೆಗೊಸ್ಕರ ಒಂದು ಕ್ರಿಕೆಟ್ ಪಂದ್ಯವನ್ನು ರಾತ್ರಿ ಇಡಿ ವಿದ್ಯುತ್ ಉರಿಸಿ ಆಡಿಸುವ ಅಗತ್ಯತೆ ಬಗ್ಗೆ ನನಗೆ ಬೇಸರವಿದೆ. ಬಿ.ಸಿ.ಸಿ.ಐ ಅವರು ವಿದ್ಯುತ್ ನ ಹಣವನ್ನು ಪಾವತಿಸಬಹುದು. ಆದರೆ ವಿದ್ಯುತ್ ಒಂದು ನವೀಕರಿಸಲಾಗದ ಶಕ್ತಿಯ ಮೂಲ ಎನ್ನುವ ವಿಷಯವನ್ನು ನಾವು ಮರೆಯಬಾರದು. ಎಷ್ಟು ಹಣ ಕೊಟ್ಟರೂ ಬಳಸಿದ ವಿದ್ಯುತ್ ಮತ್ತೆ ದೊರಕುವುದಿಲ್ಲ ಎಂಬುದು ಸತ್ಯ. ರಾಜ್ಯಕ್ಕೆ ೧೭೦೦ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ, ೪೦೦ ಕೋಟಿ ವೆಚ್ಚದಲ್ಲಿ ವಿದ್ಯುತ್ತನ್ನು ಹೊರ ರಾಜ್ಯಗಳಿಂದ ಖರೀದಿ ಮಾಡುತ್ತಿರುವುದಾಗಿ ಮಾನ್ಯ ಸಚಿವರು ಅದೇ ದಿನದಂದು ಘೋಷಿಸಿದ್ದರು. ವಿದ್ಯಾರ್ಥಿಗಳು, ಜನಸಾಮಾನ್ಯರು ವಿದ್ಯುತ್ ಇಲ್ಲ ಎಂದು ತಲೆ ಕೆಡಿಸಿಕೊಂಡರೆ ಇವರಿಗೆ ಪಂದ್ಯ ನಡೆಸುವ ಬಗ್ಗೆ ಯೋಚನೆ. ಮನೋರಂಜನೆ ಬೇಕು ಆದರೆ ಅದಕ್ಕಾಗಿ ಅನಾವಶ್ಯಕವಾಗಿ ಖರ್ಚು ಮಾಡುವುದು ಸರಿಯಲ್ಲ ಎಂದು ನನ್ನ ಭಾವನೆ.
ಇದೆ ರೀತಿಯ ಇನ್ನೊಂದು ದುಂದು ವೆಚ್ಚದ ಆಟ ಫಾರ್ಮುಲ ಒನ್ ರೇಸಿಂಗ್. ಸುಮಾರು ೨೦ ಕಾರುಗಳು ೩೦೦ ಕಿಲೋ ಮೀಟರ್ ಗೂ ಜಾಸ್ತಿ ದೂರವನ್ನು ಅರ್ಥವಿಲ್ಲದೆ ಸುತ್ತುತ್ತವೆ. ಅಷ್ಟು ಸುತ್ತುವಷ್ಟರಲ್ಲಿ ಎಷ್ಟು ಪೆಟ್ರೋಲ್ ಖರ್ಚಗಿರುತ್ತೋ ದೇವರೇ ಬಲ್ಲ. ಸಧ್ಯಕ್ಕೆ ಈ ಆಟ ಇನ್ನು ಭಾರತಕ್ಕೆ ಕಾಲಿಟ್ಟಿಲ್ಲ, ೨೦೧೧ ಅಷ್ಟರಲ್ಲಿ ಇಲ್ಲೂ ಅದು ಪ್ರಾರಂಭವಾಗುತ್ತದೆ. ಹುಡುಕಿದರೆ ಇಂತ ಅನಾವಶ್ಯಕ ಮನೋರಂಜನೆಗಳು ಬಹಳಷ್ಟು ಸಿಗುತ್ತವೆ, ಯೋಚಿಸಿ ಈ ವಿಷಯಗಳ ಬಗ್ಗೆ.