Thursday, September 30, 2010

ನಿರಾಕಾರ ಕನಸುಗಳ ಒಂದು ದಿನ...



ಬೇಲಿಯಂಚಿನ ಕಳ್ಳಿ ಗಿಡವೊಂದರ
ಎಲೆಯ ಮುರಿದು
ಒಸರುತ್ತಿರುವ ಬಿಳಿಯ ಹಾಲು
ಎಳೆದಂತೆ ಲೋಳೆಯ ಪದರ
ಗಾಳಿಗೂ ನೋಯದಂತೆ ಊದುವನು
ಗುಳ್ಳೆಗಳ ಜನನ ಪ್ರಕ್ರಿಯೆಯಲ್ಲಿ ನಿಮಿಗ್ನನಾಗಿ
ಪುಟ್ಟನ ಆಸೆಗಳ ಅರಿತಂತೆ
ಮುರಿದ ದಂಟಿನಿಂದ ಗುಳ್ಳೆಯೊಂದು ಮೂಡುವುದು
ಸಮಯದೊಂದಿಗೆ ಆಕಾರವನೂ ಪಡೆಯುತ
ಹೊಂಬಿಸಿಲಿನಲಿ ಹೊಳೆಯುತ
ಜಗವನೆ ತನ್ನೊಡಲಿನಲಿ ಹಿಡಿದಿಡುತಾ
ಗುಟ್ಟನೊಂದು ಒಡೆವೆನೆಂದು ಕೈ ಹಿಡಿದು
ಹೊತ್ತೊಯ್ಯುತಿಹುದು ಪುಟ್ಟನ ಕಿರುಕಂಗಳಿಗೆ
ಬಣ್ಣವ ಬಳಿದು
ದಿಗಂತದೆಡೆಗೆ... ಅನಂತದೆಡೆಗೆ...


11 comments:

ಮನಸು said...

chennagide....

shivu.k said...

ಶರತ್,

ಒಂದು ಒಳ್ಳೆಯ ಫೋಟೆ ತೆಗೆಯುವುದರ ಜೊತೆಗೆ ಅದಕ್ಕೊಂದು ಸೊಗಸಾದ ಕವನವನ್ನು ಹೇಗೆ ಬರೆಯಬಹುದು ಅನ್ನುವುದಕ್ಕೆ ಇವೆರಡು ಚಿತ್ರ-ಕವನಗಳೇ ಸಾಕ್ಷಿ..

Rajesh Manjunath - ರಾಜೇಶ್ ಮಂಜುನಾಥ್ said...

Simple but beautiful Sharath

Jyoti Hebbar said...

Superb kavana... vijrambhaneya hangilla...

ಗೌತಮ್ ಹೆಗಡೆ said...

mastiddu sharath :)

sunaath said...

ಶರತ್,
ಒಂದು ಅತ್ಯಂತ ಸುಂದರವಾದ ಫೋಟೋ ತೆಗೆಯುವದರ ಜೊತೆಗೆ, ಅದಕ್ಕೆ ತಕ್ಕಂತಹ ಕವನವನ್ನೂ ಕೊಟ್ಟಿದ್ದೀರಿ. ನಿಮಗೆ ಅಭಿನಂದನೆಗಳು.

ಶರಶ್ಚಂದ್ರ ಕಲ್ಮನೆ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು...

@ಶಿವು ಸರ್ ಹಾಗು ಸುನಾಥ್ ಸರ್,
ಈ ಚಿತ್ರವನ್ನು ನಾನು ತೆಗದದ್ದಲ್ಲ, ಅಂತರ್ಜಾಲದಿಂದ ಪಡೆದದ್ದು.

Shiv said...

ಶರತ್,

ಇಷ್ಟವಾಯ್ತು ನಿಮ್ಮ ಕವನ..

ಆಕಾರವನೂ ಪಡೆಯುತ ಹೊಂಬಿಸಿಲಿನಲಿ ಹೊಳೆಯುತ ಜಗವನೆ ತನ್ನೊಡಲಿನಲಿ ಹಿಡಿದಿಡುತಾ..

ಚೆನ್ನಾಗಿವೆ ಈ ಸಾಲುಗಳು.

Radhika Nadahalli said...

ಪೂರ್ತಿ ಕವನವೇ ಬಹಳ ಸೊಗಸಾಗಿದೆ...ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಲೆಂದು ಒಂದು ಸಾಲು ಬಳಸುವ ಎಂದು ನೋಡಿದರೆ ಮತ್ತೆ ಪೂರ್ತಿ ಕವನವನ್ನೇ
ಟೈಪಿಸಬೇಕಾಗುತ್ತದೆ .

ಸೀತಾರಾಮ. ಕೆ. / SITARAM.K said...

ಅದ್ಭುತ ಕಲ್ಪನೆ ಮತ್ತು ವಿಶಿಷ್ಟ ಸಾಂಕೇತಿಕತೇ ಮೇಳೈಸಿ ಕವನ ಅಮೂಲ್ಯವಾಗಿದೆ. ಅಭಿನಂದನೆಗಳು.

ವಾಣಿಶ್ರೀ ಭಟ್ said...

super!!!!! Nanna blogigomme banni..