Thursday, October 14, 2010

ಗೋಕರ್ಣದಲ್ಲೊಂದು ಬೆಳಗು...

ಒಂಟಿ ದೋಣಿಯೊಂದು ತೇಲುತಿಹುದು
ಒತ್ತಿ ಬರುವ ತೆರೆಗಳ ಜೊತೆ ಹೋರಾಡುತ್ತಾ
ಕಪ್ಪೆ ಚಿಪ್ಪುಗಳ ಹೆಕ್ಕಿ ತನ್ನ ಲಂಗದ ಜೇಬೊಳಗೆ ಸೇರಿಸುತಿಹಳು
ಬಂಗಾರ ಬಣ್ಣದ ಕೂದಲ ಪುಟ್ಟ ಹುಡುಗಿಯೊಬ್ಬಳು

ಮಣಿ ಸರಗಳೆಲ್ಲಾ ಸಿದ್ಧವಾಗುತಿವೆ ಧೂಳನ್ನು ಕೊಡವಿಕೊಂಡು
ತಮ್ಮನ್ನು ಕೊಳ್ಳಲು ಬರುವ ಗಿರಾಕಿಗಳ ನಿರೀಕ್ಷೆಯಲಿ
ಜೊತೆಯಲಿ ಪಂಡಿತರ ಮನೆ ಬೇಲಿಯ ದಾಸವಾಳಗಳು
ಕಾಯುತಿವೆ ದೇವರ ಸನ್ನಿಧಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳಲು

ಕಡಲನ್ನು ಮೊದಲ ಬಾರಿ ಕಾಣುತಿಹ ಬಯಲುಸೀಮೆಯ ಹುಡುಗರು
ಹೊರಟಿಹರು ಎದುರಿಸಲು ಭೋರ್ಗರೆವ ಅಗಾಧ ಸಾಗರವನ್ನು
ಕಡಲ ತಟದ ಗೂಡಂಗಡಿಯಲಿ ಹಬೆಯಾಡುತಿಹುದು ಕಾಫಿಯು
ಏಳಲೊಲ್ಲದು ಮುದುಡಿ ಮರಳ ಮೇಲೆ ಮಲಗಿಹ ಬೆಕ್ಕೊಂದು

ಬೀದಿ ದನವೊಂದು ನಿರುಪಾಯವಾಗಿ ನಿಂತಿಹುದು
ಕಾಮತರ ಹೋಟೆಲಿನಿಂದ ಏಳುತ್ತಿರುವ ದೋಸೆಯ ಘಮಕ್ಕೆ ಸೋತು
ಊರಿನ ಸಂದುಗೊಂದುಗಳೆಲ್ಲ ಬಂಗಾರದ ಬಣ್ಣ ಪಡೆಯುತಿರಲು
ಉದಯಿಸುತಿಹನು ಗೋಕರ್ಣದಲಿ ಆದಿತ್ಯನು....

(ಈ ವರ್ಷದ ಆದಿಯಲ್ಲಿ ಪ್ರವಾಸಕ್ಕೆ ಹೋದಾಗ ಗೋಕರ್ಣದಲ್ಲಿ ಉಳಿಯುವ ಅವಕಾಶ ಒದಗಿತ್ತು. ಒಂದು ಊರಾಗಿ ಗೋಕರ್ಣದಷ್ಟು ಬೇರಾವ ಊರು ನನ್ನ ಸೆಳೆದಿರಲಿಲ್ಲ. ಸುಮ್ಮನೆ ಅಲೆಮಾರಿಯಂತೆ ತಿರುಗಿದ ಕಡಲ ತೀರಗಳು, ರಾತ್ರಿಯಲ್ಲಿ ಜಗಮಗಿಸಿದ ಅಂಗಡಿಗಳು, ಕಡಲನ್ನೇ ಜಯಿಸಲು ಹೊರಟ ನಮ್ಮನ್ನು ತುಂಟ ಮಕ್ಕಳನ್ನು ಓಡಿಸಲು ಬಂದಂತೆ ಬಂದ ಕಡಲ ತೆರೆಗಳು, ಥಟ್ಟನೆ ನನ್ನ ಊರನ್ನು ನೆನಪಿಸಿಬಿಟ್ಟ ಬೀದಿಗಳು, ಬಿಳಿಯರು ಹಾಗು ಅವರ ವೇಷ ಭೂಷಣಗಳು, ಕಟ್ಟಿದ ಉಸುಕಿನ ಕೋಟೆಗಳು, ಕಪ್ಪೆಚಿಪ್ಪುಗಳು... ಹೀಗೆ ಇನ್ನು ಹಲವಾರು ಮಧುರ ನೆನಪುಗಳು ಸೇರಿ ನನ್ನನ್ನು ಈಗಲೂ ಗೋಕರ್ಣದ ಆಕರ್ಷಣೆಗೆ ತಳ್ಳುತ್ತವೆ. ಹೆಸರು ಕೇಳಿದೊಡನೆ ರೋಮಾಂಚನಗೊಳಿಸುವ ಗೋಕರ್ಣ ಹಾಗು ಈ ನೆನಪುಗಳನ್ನು ಸುಂದರಗೊಳಿಸಿದ ನನ್ನೆಲ್ಲ ಗೆಳೆಯ-ಗೆಳತಿಯರಿಗೆ ಈ ಕವನವನ್ನು ಅರ್ಪಿಸುತ್ತೇನೆ).

16 comments:

ಮನಸಿನ ಮಾತುಗಳು said...

Nice one Sharas... :-)

ತೇಜಸ್ವಿನಿ ಹೆಗಡೆ said...

Good one. liked it :)

Soumya. Bhagwat said...

first stanza is just amazing.ಕಪ್ಪೆ ಚಿಪ್ಪುಗಳ ಹೆಕ್ಕಿ ತನ್ನ ಲಂಗದ ಜೇಬೊಳಗೆ ಸೇರಿಸುತಿಹಳು
ಬಂಗಾರ ಬಣ್ಣದ ಕೂದಲ ಪುಟ್ಟ ಹುಡುಗಿಯೊಬ್ಬಳು..waaw..........! beautiful poem.......:)

ಪಾಚು-ಪ್ರಪಂಚ said...

Good Sharath, simple but more meaningful.

Even Gokarna is one of my fav destination :-)

sunaath said...

ಈ ಕವನವು ನಿಜವಾಗಿಯೂ ಭಾವಯಾನವಾಗಿದೆ.

ಮನಸು said...

tumba chennagide sir...

ಪ್ರಗತಿ ಹೆಗಡೆ said...

chennagide...

Subrahmanya said...

ಗೋಕರ್ಣದ ಚಿತ್ರಗಳನ್ನು ನಿಮ್ಮ ಭಾವನೆಯಲ್ಲಿ ಕವನ್ದ ಮೂಲಕ ಹೇಳಿದ್ದು ಮಧುರವಾಗಿದೆ.

Anonymous said...

ನನ್ನ ಗೋಕರ್ಣದ ಭೇಟಿಯ ಆಸೆಯನ್ನು ಮತ್ತೆ ಜೀವಂತಗೊಳಿಸಿದೆ ನಿನ್ನ ಈ ಕವನ ಶರತ್... ನಿನ್ನಲ್ಲಿನ ಕವಿ ಅಲ್ಲಿಯ ದೃಶ್ಯವನ್ನು ಚೆನ್ನಾಗಿ ಬಣ್ಣಿಸಿದ್ದಾನೆ.!

Radhika Nadahalli said...

ಸರಳ ಸುಂದರ ಕವನ. ಮನ ಸೆಳೆದ ಸಾಲು : "ಊರಿನ ಸಂದುಗೊಂದುಗಳೆಲ್ಲ ಬಂಗಾರದ ಬಣ್ಣ ಪಡೆಯುತಿರಲು ಉದಯಿಸುತಿಹನು ಗೋಕರ್ಣದಲಿ ಆದಿತ್ಯನು...."

ಅಪ್ಪ-ಅಮ್ಮ(Appa-Amma) said...

ಗೋಕರ್ಣದ ಸಮಗ್ರ ಚಿತ್ರಣ ಸುಂದರವಾಗಿ ಮೂಡಿಬಂದಿದೆ..
ಅದ್ಭುತವಾಗಿ ಮೂಡಿಬಂದಿದೆ ಸಾಲುಗಳು

ಸಾಗರದಾಚೆಯ ಇಂಚರ said...

ಗೋಕರ್ಣದ ಚಿತ್ರಣ ಸುಂದರವಾಗಿ ಬಂದಿದೆ

ಗೋಕರ್ಣ ಇಂದಿಗೂ ಸೋಜಿಗವೇ

ಅಲ್ಲಿನ ದೇವಸ್ಥಾನ ದ ಅರ್ಚಕರು

ಶಿವಲಿಂಗ

ಸಮುದ್ರ....

ಬಿಳಿಯರು...

ವಂಚಕರು...

ಪ್ರವೀಣ್ ಭಟ್ said...

Wov Sharath.. mast iddu... ond sala gokarna hoi banda haage atu..

ನಾಗರಾಜ ಭಟ್ಟ said...

ಕವನ ಓದುತ್ತಿದ್ದರೆ ಆರೆಂಟು ವರ್ಷಗಳ ಹಿಂದೆ ಗೋಕರ್ಣಕ್ಕೆ ಹೋದಾಗ ಸಮದ್ರದ ಉಪ್ಪುಪ್ಪು ನೀರಲ್ಲಿ ಈಜಾಡಿದ್ದು ನೆನಪಾಯ್ತು ...ಅಷ್ಟೊಂದು ಕಪ್ಪೆ ಚಿಪ್ಪುಗಳಿದ್ದರೂ ಒಂದೂ ಹೆಕ್ಕಿ ತರಲಿಲ್ಲಿವಲ್ಲ ಎಂಬ ಕೊರಗು ಇನ್ನೂ ಕಾಡುತ್ತಾ ಇದೆ.

ನಾಗರಾಜ ಭಟ್ಟ said...

ಕವನ ಓದುತ್ತಿದ್ದರೆ ಆರೆಂಟು ವರ್ಷಗಳ ಹಿಂದೆ ಗೋಕರ್ಣಕ್ಕೆ ಹೋದಾಗ ಸಮದ್ರದ ಉಪ್ಪುಪ್ಪು ನೀರಲ್ಲಿ ಈಜಾಡಿದ್ದು ನೆನಪಾಯ್ತು ...ಅಷ್ಟೊಂದು ಕಪ್ಪೆ ಚಿಪ್ಪುಗಳಿದ್ದರೂ ಒಂದೂ ಹೆಕ್ಕಿ ತರಲಿಲ್ಲಿವಲ್ಲ ಎಂಬ ಕೊರಗು ಇನ್ನೂ ಕಾಡುತ್ತಾ ಇದೆ.

ಸೀತಾರಾಮ. ಕೆ. / SITARAM.K said...

ಗೋಕರ್ಣದ ಬೆಳಗಿನ ಚಿತ್ರಣ ಯಥಾವತ್ತಾಗಿ ಇರಿಸಿದ್ದಿರಿ...
ಬೆಳಗಿನ ಜೊತೆ ತೆರೆದುಕೊಳ್ಳುವ ಜನ-ಪ್ರಾಣಿಗಳ ಬದುಕ ಪರಿ ಚೆನ್ನಾಗಿದೆ.