Monday, December 12, 2011

ಬರವಣಿಗೆಯ ಮೋಹಕ್ಕೆ ಮತ್ತೆ ಸಿಲುಕುವ ಮುನ್ನ...

ಯಾವುದೇ ಅವಸರವಿಲ್ಲದ ಒಂದು ಮಧ್ಯಾಹ್ನದಲಿ ಕಿಟಕಿಯ ಬಳಿ ಕುಳಿತು ಯೋಚಿಸುತ್ತಾ ಪೆನ್ನಿನ ತುದಿಯನ್ನು ಕಚ್ಚಿ ನೆನಪಿಗೆ ಬಂದ ಕವಿತೆಯೊಂದರ ಸಾಲನ್ನು ಬಿಳಿ ಹಾಳೆಯ ಮೇಲೆ ಮೆಚ್ಚಿನ ಪೆನ್ನಿನ ಶಾಯಿಯಲ್ಲಿ ಮೂಡಿಸಿ, ತನ್ನ ಭಾವಗಳು ಅಕ್ಷರಗಳಲ್ಲಿ ಆರುತ್ತಿರುವುದನ್ನು ಅಚ್ಚರಿಯಿಂದ ಗಮನಿಸುತ್ತಾ, ತನ್ನ ಮುಗ್ಧ ಮನಸ್ಸಿಗೆ ತಾನೇ ಸೋತು, ಪದಗಳು ಮನಸಿಗೆ ಬಾರದೆ ಸತಾಯಿಸಿರಲು ಆಕಳಿಸಿ ಎದುರಿನ ಮೇಜಿನ ಮೇಲೆಯೇ ಮಲಗಿ, ರವಿ ದಿನವನ್ನು ಬಿಟ್ಟು ಕೊಡುವ ಹೊತ್ತಿನಲ್ಲಿ ಎಚ್ಚರಗೊಂಡು ಮಲಗುವ ಮೊದಲು ತಾನೇ ಬರೆದಿಟ್ಟ ಸಾಲುಗಳನ್ನು ನೋಡಿ ನಗುವ ನಾನು... ಈ ಅಚ್ಚರಿಯ ಪ್ರಕ್ರಿಯೆಯ ಭಾಗವಾಗದೇ ಅದೆಷ್ಟು ತಿಂಗಳುಗಳು ಕಳೆದವು... ಆರ್ದ್ರಗೊಳ್ಳದೆ ಯುಗಗಳನ್ನು ಕಳೆದ ಮನಸ್ಸಿನಂತೆ...

(ಸರಿ ಸುಮಾರು ಹನ್ನೊಂದು ತಿಂಗಳುಗಳು ಆಯಿತು ನಾನು ಬರೆಯುವುದನ್ನು ನಿಲ್ಲಿಸಿ. ಕಾಲೇಜ್ ಜೀವನದಿಂದ ಪ್ರೊಫೆಶನಲ್ ಜೀವನಕ್ಕೆ ಬಿದ್ದೊಡನೆಯೇ ಗೊತ್ತಾಗಿದ್ದು ನಮ್ಮ ಹವ್ಯಾಸಗಳನ್ನು ಸಂಭಾಳಿಸಿಕೊಂಡು ಹೋಗುವ ಕಷ್ಟ. ಕಳೆದ ಒಂದು ವರ್ಷ ನನ್ನನ್ನೂ ನಾನು ಮರೆತು ಕೆಲಸ ಮಾಡಿದ್ದೆ. ಸ್ನೇಹಿತರು ಅಥವಾ ಕುಟುಂಬಕ್ಕೆ ಹೋಗಲಿ, ನನಗೇ ನಾನು ಸಮಯವನ್ನು ಇಟ್ಟುಕೊಳ್ಳಲು ಆಗಲಿಲ್ಲ. ಹೊಸ ಕೆಲಸ ಹಿಡಿದ ಮೇಲೆ ಸ್ವಲ್ಪ ಸಮಯ ಸಿಕ್ಕುತ್ತಿದೆ ಜೊತೆಗೆ ನನ್ನ ಹವ್ಯಾಸಗಳ ಕಡೆ ಗಮನ ಹರಿಸುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಬ್ಲಾಗ್ ಲೋಕದಲ್ಲಿ ಏನೇನು ಆಗಿದೆ ಎಂದೂ ನನಗೆ ಗೊತ್ತಿಲ್ಲ. ಮತ್ತೆ ಬರೆಯುವ ಹುಮ್ಮಸ್ಸು ಮೂಡಿದೆ. ಬಿಟ್ಟು ಹೋದ ಊರಿಗೆ ಮತ್ತೆ ಹಿಂತಿರುಗಿದಂತೆ ಅನ್ನಿಸುತ್ತಿದೆ..)

4 comments:

Anonymous said...

welcome back Tamma!! blogloka ninnanna yedurunoDuttittu!!

sunaath said...

ಸುಸ್ವಾಗತ! ನಿಮ್ಮ ಲೇಖನಗಳಿಗಾಗಿ ಕಾಯುತ್ತೇವೆ.

prashasti said...

ಚೆನ್ನಾಗಿದೆ :-) ಗೆಳತಿಯ ಬ್ಲಾಗನ್ನು ಓದಿ ಮೆಚ್ಚಿದಾಗ ಆಕೆ ಹೇಳಿದ ಮಾತು ಒಂದೇ. ಶರಶ್ಚಂದ್ರ ಕಲ್ಮನೆಯವರ "ಭಾವಯಾನ" ಓದು ಅಂತ. ಪ್ರಾಯಶ: ಇಲ್ಲಿ ಬಂದು ಓದಿದ್ದೇ ನನಗೆ ನಂದೂ ಒಂದು ಬ್ಲಾಗು ಶುರು ಮಾಡಬೇಕೆಂಬ ಆಸೆ ಬಲವಾಗಲು ಕಾರಣವಾಯಿತೇನೋ. ಇತ್ತೀಚೆಗೆ ನೀವು ಬರೆಯದೇ ಇದ್ದರೂ ನಿಮ್ಮ ಬ್ಲಾಗಿಗೆ ಬಂದು ನಿಮ್ಮ ನರಸಿಂಹ ಪರ್ವತಾರೋಹಣ ಮೊದಲಾದ ಲೇಖನಗಳನ್ನು ಓದಿ ಮೆಚ್ಚಿದವನು ನಾನು. ಆ ನಿಟ್ಟಿನಲ್ಲಿ ಮತ್ತೊಮ್ಮೆ ಅಭಿನಂದನೆಗಳನ್ನೂ ಧನ್ಯವಾದಗಳನ್ನೂ ಹೇಳಬಯಸುತ್ತೇನೆ ಈ ಮೂಲಕ.

ಇತ್ತೀಚೆಗಷ್ಟೇ ಅಲ್ಲದಿದ್ದರೂ ಶುರುಮಾಡಿದ ವರ್ಷವೂ ಕಳೆಯುವುದರೊಳಗೇ ಹಲವಷ್ಟು ಗೀಚಿದ , ಮನದ ಸಖನಾದಂತಿದ್ದ ಬ್ಲಾಗನ್ನು ಬಿಡುವ ಅನಿವಾರ್ಯತೆ ನನಗೂ ಬಂದೊದಗಿದೆ ಈಗ.. ನೀವು ಹೇಳಿದಂತೆಯೇ ಕೆಲಸಕ್ಕೆ ಸೇರುವ ಕಾಲ ಬಂದೊದಗಲಿದೆ ಕೆಲದಿನಗಳಲ್ಲೇ.. ಮತ್ತೆ ಬರೆಯಲು ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಚಿಂತೆಯಿತ್ತು ಮನದ ಮೂಲೆಯಲ್ಲಿ. ಆದರೆ ಮತ್ತೆ ವಾಪಾಸಾದ ನಿಮ್ಮನ್ನು ನೋಡಿ ಮತ್ತೆ ಆಶಾಕಿರಣವೊಂದು ಮೂಡಿದೆ. ಕೆಲತಿಂಗಳು ಬರೆಯಲಾಗದಿದ್ದರೂ ಮತ್ತೆ ಎಂದೋ ಒಂದು ದಿನ ಮರಳುವೆನೆಂದು.. ಅಲ್ಲಿಯವರೆಗೆ ಬರೆಯುವ ಆಸೆ ಸಾಯದೇ ಇದ್ದರೆ...
ಮತ್ತೊಮ್ಮೆ ವಂದನೆಗಳೊಂದಿಗೆ..

ವಾಣಿಶ್ರೀ ಭಟ್ said...

welcome back... keep writing!!!