Friday, August 15, 2008

ಬಾಲದಂಡೆ ಹಕ್ಕಿ (Asian Paradise Flycatcher)


ಸಂಸ್ಕೃತದಲ್ಲಿ ಅರ್ಜುನಕ ಎಂದೂ, ಕೊಡವ ಭಾಷೆಯಲ್ಲಿ ರಾಜನೂಕರೆ ಎಂದೂ ಕರೆಯಲ್ಪಡುವ ಈ ಹಕ್ಕಿ ಭಾರತದಲ್ಲಿ ಕಂಡುಬರುವ ಅತೀ ಸುಂದರ ಪಕ್ಷಿಗಳಲ್ಲಿ ಒಂದು. ಈ ಹಕ್ಕಿಯು ೨೦ ಸೆಂಟಿಮೀಟರ್ ದೇಹವನ್ನೂ ಹಾಗು ೫೦ ಸೆಂಟಿಮೀಟರ್ ಉದ್ದದ ಬಾಲವನ್ನು ಹೊಂದಿರುತ್ತದೆ. ಬಾಲದಲ್ಲಿ ಎರಡು ಗರಿಗಳಿರುತ್ತವೆ. ಹೆಣ್ಣು ಹಕ್ಕಿಗಳಿಗೆ ಬಾಲದ ಗರಿಗಳಿರುವುದಿಲ್ಲ. ಈ ಹಕ್ಕಿಯು ಉದುರೆಲೆ, ಬಿದಿರುಕಾಡುಗಳು, ತೋಟ, ಜನವಸತಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಅತ್ಯಂತ ಚಟುವಟಿಕಯಲ್ಲಿ ತೊಡಗಿರುತ್ತವೆ. ಕೀಟಗಳು ಇವುಗಳ ಮುಖ್ಯ ಆಹಾರ. ಇವು ಮರ, ಪೊದೆ, ಬಿದಿರು ಮೆಳೆಗಳ ನಡುವೆ ಗೂಡನ್ನು ನಿರ್ಮಿಸುತ್ತವೆ. ಹುಲ್ಲು, ನಾರುಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಗೂಡಿನ ಹೊರಮೈಗೆ ಜೇಡರ ಬಲೆಯನ್ನು ಸುತ್ತುತ್ತವೆ. ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ ಫೆಬ್ರವರಿಯಿಂದ ಜುಲೈವರೆಗೆ. ಕೆಂಪು ಮಿಶ್ರಿತ ಕಂದು ಚುಕ್ಕೆಗಳಿರುವ ಮೊರರಿಂದ ಐದು ತಿಳಿ ಗುಲಾಬಿ ಮೊಟ್ಟೆಗಳನ್ನು ಇಡುತ್ತದೆ. ಗಂಡು ಪಕ್ಷಿಯು ಹಾರುವಾಗ ಬಿಳಿ ಗರಿಗಳು ಗಾಳಿಪಟದ ಬಾಲಂಗೋಚಿಗಳಂತೆ ಆಕರ್ಷಕವಾಗಿ ಕಾಣುತ್ತದೆ. ಈ ಪಕ್ಷಿಯು ಮಧ್ಯಪ್ರದೇಶದ ರಾಜ್ಯಪಕ್ಷಿ.
(ಚಿತ್ರವನ್ನು ದೊಡ್ದದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ)

2 comments:

Harisha - ಹರೀಶ said...

ಸುಂದರ ಚಿತ್ರ! ಉತ್ತಮ ಮಾಹಿತಿ ಕೂಡ :-)

shivu.k said...

ಶರತ್,
ನಾನು ಬಾಲದಂಡೆ[paradise flycatcher]ಹಕ್ಕಿಯನ್ನು ಫೋಟೊ ತೆಗೆಯಲು ಪ್ರಯತ್ನಿಸಿ ವಿಫಲನಾಗಿದ್ದೆ. ಮತ್ತೊಮ್ಮೆ ಎಂದಾದರೂ ಪ್ರಯತ್ನಿಸಬಹುದು. ನಿಮ್ಮ ಚಿತ್ರ ಮತ್ತು ಮಾಹಿತಿ ಸೊಗಸಾಗಿದೆ.