Sunday, October 5, 2008

ಇನ್ನೆರಡು ಚಿತ್ರಗಳು



ನನ್ನ ಹಳೆಯ ಪುಸ್ತಕಗಳಲ್ಲಿ ಇದ್ದ ಎರಡು ಚಿತ್ರಗಳನ್ನು ಪೋಸ್ಟ್ ಮಾಡುತ್ತ ಇದ್ದೇನೆ.

ಮೊದಲನೆಯದು ಇನ್ನು ಚನ್ನಾಗಿ ನೆನಪಿದೆ, ಕಾಲೇಜ್ ಪ್ರಾರಂಭವಾದ ಮೊದಲನೆ ದಿನ ಬಿಡಿಸಿದ್ದು. ಕಾಲೇಜ್ ಇಂದ ಬಂದು ಏನು ಕೆಲಸವಿಲ್ಲದೆ ಬಾಗಿಲ ಬಳಿ ದಿಟ್ಟಿಸುತ್ತಾ ಕುಳಿತಿದ್ದಾಗ ನನ್ನ ಶೂಗಳು ಕಂಡವು, ಅದನ್ನೇ ಪೇಪರ್ ಮೇಲೆ ಮೂಡಿಸಿದೆ.

ಎರಡನೆಯದನ್ನು ಯಾವಾಗ ಚಿತ್ರಿಸಿದ್ದು ಎಂದು ನೆನಪಿಲ್ಲ, ಆದರೆ ಆ ಮರದ ಹೂಜಿ ಇನ್ನು ನಮ್ಮ ಮನೆಯಲ್ಲಿ ಇದೆ.

ಇವೆರಡು ಚಿತ್ರಗಳನ್ನು ಯಾವುದೇ ಗುರಿ ಇಟ್ಟುಕೊಳ್ಳದೆ ಚಿತ್ರಿಸಿದ್ದು ಆದ್ದರಿಂದ finishing ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ.

11 comments:

ತೇಜಸ್ವಿನಿ ಹೆಗಡೆ said...

ಶರಶ್ಚಂದ್ರ,

ಭಾವಯಾನಕ್ಕೆ ಕೊನೆ ಮೊದಲಿಲ್ಲೆ ನೋಡು. ಆದಾಗಲೆಲ್ಲ ಭೇಟಿ ಕೊಡ್ತನೇ ಇರ್ತಿ.. ನೀ ಬೇಡ ಅಂದ್ರೂನೂವ :)

ಮೊದನಲೆಯ ಚಿತ್ರದ ಫಿನಿಶಿಂಗ್ ಎರಡನೆಯದಕ್ಕಿಂತನೂ ಚೆನ್ನಾಗಿ ಬಂಜು.

ಮತ್ತೆ "ಸ್ತ್ರೀ.." ಕವಿತೆಯ ಬಗ್ಗೆ ಲೇಖನ ಬರದ್ದೆ ಹೇಳಿದ್ದೆ. ಅದ್ಯಾವಗ ನಿನ್ನ ಬ್ಲಾಗ್‌ನಲ್ಲಿ ಬಪ್ಪದು? ಕಾಯ್ತಾ ಇದ್ದಿ....

ಮನಸ್ವಿ said...

ಚನಗಿದ್ದಪ 2 ಚಿತ್ರನೂ, ಇನ್ನೂ ಸರಿಯಾಗಿ ಹುಡುಕು ಎಷ್ಟಿದ್ದೇನ.. ನೀನು ಬಿಡ್ಸಿಟ್ಟಿರ ಚಿತ್ರಗಳು.. ಪೋಸ್ಟ್ ಮಾಡು, ಕಾಯ್ತಾ ಇರ್ತಿ.
finishing ಬಗ್ಗೆ ಕೇಳಿದ್ದು ಯಾರು ಈಗ!! :)

"ಸ್ತ್ರೀ.." ಕವಿತೆ ಬಗ್ಗೆ ಎಂತ ಬರದ್ಯೋ..??

Harisha - ಹರೀಶ said...

ಸೂಪರ್ ಡ್ರಾಯಿಂಗ್...

ನಿನ್ನ ಭಾವಯಾನ ಪೇಪರ್ ಮೇಲೂ ಹರೀತು ಅಂತ ಗೊತಿರ್ಲೆ!

ಚಿತ್ರಾ ಸಂತೋಷ್ said...

ಎರಡೂ ಚಿತ್ರಗಳು ಚೆನ್ನಾಗಿವೆ. ಭಾವಯಾನ ಸರ್ವಂ ಪ್ರಕೃತಿಮಯಂ ಆಗಿದೆ. keep it up! ಶುಭವಾಗಲಿ..

ಶರಶ್ಚಂದ್ರ ಕಲ್ಮನೆ said...

ತೇಜಸ್ವಿನಿ ಅಕ್ಕ,
ಸುಮ್ನೆ ತಮಾಷೆಗೆ ಹಾಗೆ ಅಂದಿ ಅಷ್ಟೆ, ನೀನು ಯಾವಾಗಲು ಬ್ಲಾಗ್ ಗೆ ಭೇಟಿ ಕೊಡ್ತೆ ಅಂತ ಗೊತಿದು :) ಸದ್ಯದಲ್ಲೇ ಪೋಸ್ಟ್ ಮಾಡ್ತಿ ಆ ಲೇಖನನ. ಈಗಿತ್ಲಾಗೆ ಸ್ವಲ್ಪ ಬ್ಯುಸಿ ಅದಕ್ಕೆ ಪೋಸ್ಟ್ ಮಾಡಕ್ಕೆ ಆಗ್ತಾ ಇಲ್ಲೇ.


ಆದಿತ್ಯ,
ಹೌದಪ ಒಂದು ಬರಹ ಬರ್ದಿದ್ದಿ ಸ್ತ್ರೀ ಬಗ್ಗೆ, ಪೋಸ್ಟ್ ಮಾಡ್ತಿ ಸದ್ಯದಲ್ಲೇ. Thanks for your comment on my sketchings :)


ಹರೀಶ,
ಈಗ ಗೊತಾತಲ :) ಥ್ಯಾಂಕ್ಸ್ ಭೇಟಿ ಕೊಟ್ಟಿದ್ದಕ್ಕೆ :)


ಚಿತ್ರ ಅವ್ರೆ,

ಧನ್ಯವಾದಗಳು ಭೇಟಿ ನೀಡಿದ್ದಕ್ಕೆ. ನಿಮ್ಮ ಬ್ಲಾಗ್ ಓದಿದ್ದೆ ಮೊದ್ಲು. ಇತ್ತೀಚಿಗೆ ಕಾಲೇಜ್ ಹಾಗು ವಿದ್ಯಾಭ್ಯಾಸದಲ್ಲಿ ಸ್ವಲ್ಪ ಬ್ಯುಸಿ ಇರೋದ್ರಿಂದ ನಿಮ್ಮ ಹೊಸ ಪೋಸ್ಟ್ ಗಳನ್ನು ಓದಿಲ್ಲ. :) Keep visiting.

ಪಲ್ಲವಿ ಎಸ್‌. said...

ಚಿತ್ರಗಳು ಚೆನ್ನಾಗಿವೆ ಶರತ್‌.

ಪೆನ್ಸಿಲ್‌ನಿಂದ ಬಿಡಿಸಿದ ಚಿತ್ರಗಳ ಮಜಾನೇ ಬೇರೆ. ಷೂಗಳು ಹರಿದುಹೋಗಬಹುದು. ಆದರೆ, ಚಿತ್ರದಲ್ಲಿ ಅವು ಜೀವಂತವಾಗಿವೆ.

ಏಕೋ ಸೈಜ್‌ ಚಿಕ್ಕದು ಅನಿಸಿತು :)

- ಪಲ್ಲವಿ ಎಸ್‌.

shivu.k said...

ಶರತ್ ಸಾರ್,

ಎರಡೂ ಚಿತ್ರಗಳೂ ತುಂಬಾ ಚೆನ್ನಾಗಿವೆ. ಇನ್ನೂ finishing touch ಇಲ್ಲದೇನೇ ಈ ರೀತಿ ಇರಬೇಕಾದ್ರೆ ಇನ್ನೂ ಅದು ಆದ ಮೇಲೆ ಇನ್ನೆಷ್ಟು ಚೆನ್ನಾಗಿ ಕಾಣಬಹುದು !!

ಶರಶ್ಚಂದ್ರ ಕಲ್ಮನೆ said...

ಧನ್ಯವಾದಗಳು ಪಲ್ಲವಿ ಅವ್ರೆ,
ಹೌದು ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ, ಪೆನ್ಸಿಲ್ ಸ್ಕೆಚಿಂಗ್ ಮಜಾನೆ ಬೇರೆ. ಚಿತ್ರದ ಮೇಲೆ ಕ್ಲಿಕ್ ಮಾಡಿ ದೊಡ್ಡದಾಗಿ ಕಾಣುತ್ತದೆ.


ಶಿವೂ ಅವ್ರೆ,
ಸಾರ್ ಅಂತ ಕರಿಬೇಡಿ, ಆತ್ಮೀಯತೆ ಇರೋಲ್ಲ. ಶರತ್ ಅಂತ ಕರೀರಿ ಸಾಕು :)

Ittigecement said...

ಶರತ್.. ಬಹಳ ಚೆಂದ ಬಿಡಸ್ತೆ ಮಾರಯ..! ಪ್ರಾಕ್ಟೀಸ್ ಮಾಡ್ತ ಇರು.ಈ ದೀಪವಳಿಗೆ ನಮ್ಮನೆಗೆ ಬಾ. ಬೇರೆ ಬೇರೆ ತರಹದ ಹಣತೆ ಇದ್ದು. ನೀಂಗೆ ಸ್ಪೂರ್ತಿ ಬರಬಹುದು...! ಬರಲಿಕ್ಕೆ ಟ್ರಾಫಿಕ್ ಜಾಮ್ ಹೇಳಡ. ಮುದ್ದಾಮ್ ಬಾ.

Prakaaashannaaa

ದೀಪಸ್ಮಿತಾ said...

ತುಂಬಾ ಚೆನ್ನಾಗಿ ಬಿಡ್ಸ್ತೀರ್ರಿ ಬಿಡ್ರಿ. ನಾನೂ ಮೊಡ್ ಇದ್ದಾಗ ಪೆನ್ಸಿಲ್ ಚಿತ್ರ ಗೀಚ್ತಾ ಇರ್ತೀನಿ

srujan said...

sharath
chithra chennagive..
symmetry perfect agide..
sumaaru dinagalinda sketches nodiralilla..khushiyaythu..
innu bare.
bhavayana noduthhiddene..

srujan
illustrator