ಕಾಡಿಸಿ ಕಾಡಿಸಿ ಕೊನೆಗೂ ನೆನಪಾಗದ ಅವಳ ಮುದ್ದು ಮೊಗ, ಸಂತೆಯಲ್ಲಿ ಬಿಕರಿಯಾಗದೆ ಉಳಿದ ತರಕಾರಿ ಮೂಟೆಗಳು ಮತ್ತು ಅವುಗಳೊಂದಿಗೆ ಚಿಂತೆಯ ಗೆರೆಗಳನ್ನು ಮುಖದ ಮೇಲೆ ಮೂಡಿಸಿಕೊಂಡಿರುವ ಅವುಗಳ ಯಜಮಾನ, ಪ್ರಪಂಚವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ತಾಯಿಯ ಸೊಂಟಕ್ಕೆ ಅಂಟಿಕೊಂಡಿರುವ ಭಿಕ್ಷುಕಿಯ ಮಗು, ಮನೆಯಲ್ಲಿ ಜಗಳ ಮಾಡಿಕೊಂಡು ಮಹಾನಗರಿಗೆ ಬಂದಿಳಿದ ಯುವಕನ ಆತಂಕದ ಕಣ್ಣುಗಳು, ಮಾಡದ ತಪ್ಪಿಗೆ ವಿಷ ತಿಂದು ಸತ್ತ ಆನೆಗಳ ಮಡಿಲಲ್ಲಿದ್ದ ಆ ಮರಿಯಾನೆಯ ಮುಗ್ಧ ನಯನಗಳು. ಇವೆಲ್ಲವೂ ಇತ್ತೀಚಿಗೆ ನನ್ನನ್ನು ಕಾಡುತ್ತಿರುವ ಮುಖಗಳು.
10 comments:
ಶರತ್,
ಇಂಥ ಮುಖಗಳು ಮತ್ತು ಅವುಗಳ ಕಣ್ಣಿನ ಭಾವನೆಗಳೂ ನನಗೂ ಯಾವಾಗಲು ಕಾಡುತ್ತವೆ.. ಇಂಥ ಚಿತ್ರಗಳನ್ನು ನೋಡಿದಾಗ ಕಣ್ಣಂಚಿನಲ್ಲಿ ಒಂದನಿಯಾದರೂ ಇಣುಕದಿರದು....
ಫೋಟೊ ಮತ್ತು ಬರಹ ತುಂಬಾ ಅಪ್ತವಾಗಿದೆ.
ನನ್ನ ಬ್ಲಾಗಿನಲ್ಲಿ ಸಂತೆ ವಿಚಾರವೊಂದಿದೆ ಬನ್ನಿ..
ನೀವು ಹಾಕಿರುವ ಮರಿಯಾನೆಯ ಮುಖ ನನ್ನನ್ನೂ ತುಂಬ ಕಾಡಿತು. ಇಂಥ ಬಿಂಬಗಳು ತುಂಬ ದಿನ ಮನದಲ್ಲಿ ಉಳಿದುಬಿಡುತ್ತವೆ. ಚಿಕ್ಕದೊಂದು ವಿಷಾದ ಭಾವದೊಂದಿಗೆ.
ನಿಮ್ಮ ಚಿತ್ರಗಳು ಇಷ್ಟವಾಗುತ್ತೆ. ಅಂದಹಾಗೆ ಕ್ಷಮಿಸಿ, ನಿಮ್ಮ ಅನುಮತಿ ಪಡೆಯದೆ ನಿಮ್ಮ ಬ್ಲಾಗ್ ಲಿಂಕ್ ಸೇರಿಸಿಕೊಳ್ಳುತ್ತಿದ್ದೇನೆ.
ಹೌದು ಶಿವು ಅವ್ರೆ, ಕೆಲವೊಮ್ಮೆ ಜೀವನ ಎಷ್ಟು ಕ್ರೂರ ಎನ್ನಿಸುತ್ತದೆ. ಹೋಟೆಲ್ ನಲ್ಲಿ ನಾವು ತಿಂಡಿ ತಿನ್ನುತ್ತಿರುತ್ತೇವೆ, ಅದನ್ನೇ ನೋಡುತ್ತಿರುವ ಬಡ ಮಗುವನ್ನು ನೋಡಿದಾಗ ನಮಗೆ ತಿಂಡಿಯನ್ನು ಮುಂದುವರೆಸುವ ಮನಸ್ಸು ಬರುವುದಿಲ್ಲ. ಕೆಲವೊಮ್ಮೆ ನಾನು ತುಂಬ ಯೋಚನೆಗೆ ಒಳಗಾಗುತ್ತೇನೆ ಯಾಕೆ ಸಮಾನತೆ ಇಲ್ಲ ಎಂದು, ಉತ್ತರ ಇನ್ನೂ ದೊರಕಿಲ್ಲ, ದೊರಕುವುದಿಲ್ಲ ಎಂಬ ಸತ್ಯವೂ ಗೊತ್ತಿದೆ... We just have to move on with life......
ವೈಶಾಲಿ ಅವ್ರೆ,
ಧನ್ಯವಾದಗಳು ನನ್ನ ಬ್ಲಾಗ್ ಕಡೆ ಕಣ್ಣು ಹಾಯಿಸಿದ್ದಕ್ಕೆ. ಅಗತ್ಯವಾಗಿ ಸೇರಿಸಿಕೊಳ್ಳಿ ನನ್ನ ಬ್ಲಾಗ್ ಲಿಂಕನ್ನು. ಅದಕ್ಕೋಸ್ಕರ ಕ್ಷಮೆ ಕೇಳುವ ಅಗತ್ಯವಿಲ್ಲ. ವಿಷಾದ ಭಾವನೆ ಉಂಟು ಮಾಡುವ ಬಹಳಷ್ಟು ಘಟನೆಗಳು ಜೀವನದಲ್ಲಿ ನಡೆಯುತ್ತಿರುತ್ತವೆ, ಆದರೆ ಅದನ್ನೆಲ್ಲಾ ಅಲ್ಲೇ ಬಿಟ್ಟು ಮುಂದುವರೆಯಬೇಕಾದ ಪರಿಸ್ಥಿತಿ ನನ್ನನ್ನು ಆತಂಕಕ್ಕೀಡು ಮಾಡುತ್ತದೆ.
ವೈಶಾಲಿ ಅವ್ರೆ,
ನಿಮ್ಮ ಲಿಂಕನ್ನು ನಿಮ್ಮ ಅನುಮತಿ ಇಲ್ಲದೆ ನಾನು ನನ್ನ ಬ್ಲಾಗಲ್ಲಿ ಸೇರಿಸಿಕೊಲ್ಲುತ್ತಿರುವೆ. :)
ಅಬ್ಬಾ! ನಿಜ್ವಾಗ್ಲೂ ಫೋಟೋದೊಳಗಿನ ಕಣ್ಗಳೊಳಗಿನ ದೈನ್ಯತೆ, ಆದ್ರತೆ ಮನಹಿಂಡಿತು :(
ಚನಾಗಿ ಬರದ್ದೆ, ಭರ್ತಿ ತಲೆ ಬಿಸಿ ಮಾಡ್ಕ್ಯಂಡಂಗೆ ಕಾಣ್ತು ಎಂತಾ ಕಥೆ ನಿಂದು?!.. ಹೌದೂ ಕಾಡಿಸಿ ಕಾಡಿಸಿ ನೆನಪಾದ ಅಂತಿರ ಸಾಲು ಇಷ್ಟ ಆತು, ಆದ್ರೆ ಬಿಕ್ಷುಕಿ ಮಗಳು ನಿನ್ನ ಎಂತಕ್ಕೆ ಕಾಡ್ತ! ಸುಮ್ನೆ ಹೇಳ್ದಿ, ಈಗ ಸೀರಿಯಸ್ಸಾಗಿ ಕೇಳ್ತಿದ್ದಿ
ಎಲ್ಲರದ್ದು ಕೊಂಡಿ ಹಾಕಿಕೊಲ್ತಾ ಇದ್ಯ? ಎನ್ ಜನ ಬ್ಯಾಡ ಹೇಳಿರು ಕೇಳ್ತಲ್ಲೆ ;)
ಶರತ್,
ಚಿತ್ರ ಬರಹ ಎರಡೂ ಇಷ್ಟವಾದವು..
ಆ ಅಜ್ಜನ ಮುಖ ನೋಡಿದರೆ ಬದಲಾದ ಕಾಲದ ಫಲವೋ ಅಂತ ಅನ್ಸ್ತಾ ಇದ್ದು...
ಕಾಲ ಎಲ್ಲರಿಗೂ ಒಂದಲ್ಲಾ ಒಂದು ಸಲ ಕಷ್ಟ ಕೊಟ್ಟು ಪರೀಕ್ಷೆ ಒಡ್ಡೇ ಒಡ್ತು ಅಲ್ದ?
ಆದಿತ್ಯ,
ತಲೆ ಯಾವಾಗ್ಲೂ ಕೆಡ್ತು ಇಂತ ಪರಿಸ್ಥಿತಿನ ನೋಡಿದಾಗ. ಇನ್ನೂ ಬೇಜಾರಿನ ವಿಷ್ಯ ಅಂದ್ರೆ ನಮ್ಮ ಕೈಯ್ಯಲ್ಲಿ ಎಂತು ಮಾಡಕ್ಕೆ ಆಗದೆ ನಿಸ್ಸಹಯಕರಾಗಿ ಹೋಗ್ತ್ವಲ ಅಂಥ. ಎಲ್ಲೂ ಕೊಂಡಿ ಹಾಕಿ ಕೊಳ್ಳಲ್ಲೇ ಮಾರಾಯ ಇನ್ನು :)
ಜೋಮನ್,
ಧನ್ಯವಾದಗಳು :)
ಹರೀಶ,
ನೀನು ಹೇಳಿದ್ದು ಸತ್ಯ. ಕಾಲ ಎಲ್ಲರಿಗೂ ಕಷ್ಟದ ಪರೀಕ್ಷೆ ಒಡ್ಡದೆ ಬಿಡಧಿಲ್ಲೆ, ಆದ್ರೆ ಇದಕ್ಕೆ ಕೊನೆನೆ ಇಲ್ಯ ಅನ್ನೋ ಪ್ರಶ್ನೆ ನನ್ನ ಕಾಡ್ತಾ ಇದ್ದು.
ಶರತ್ ರವರೆ,
ಇಂದು ಮತ್ತೆ ನಾನು ಕಾಮೆಂಟ್ ಓದಲು ನಿಮ್ಮ ಬ್ಲಾಗಿಗೆ ಬಂದೆ. ಅದಕ್ಕೆ ಕಾರಣವಿದೆ. ರಾತ್ರಿ ೯-೩೦ಕ್ಕೆ ಊಟ ಮುಗಿಸಿ ನನ್ನ ಪತ್ನಿಗೆ ಸ್ವಲ್ಪ ಕೆಮ್ಮು ಜ್ವರ ಗಂಟಲಿನ ತೊಂದರೆ ಇದ್ದುದರಿಂದ ಮೆಡಿಕಲ್ ಸ್ಟೋರಿಗೆ ನಾವಿಬ್ಬರು ಹೋದೆವು. ಹೋಗುವ ದಾರಿಯಲ್ಲಿ ನಮ್ಮ ಮಲ್ಲೇಶ್ವರಂ ರೈಲ್ವೆ ನಿಲ್ದಾಣ ದಾಟಿ ಹೋಗಬೇಕು. ಹಾಗೆ ಅಲ್ಲಿ ಟಿಕೆಟ್ ಕೊಡುವ ಕೌಂಟರಿನ ಬಳಿ ಒಬ್ಬ ವಯಸ್ಸಾದ ಮುದುಕ ಮಲಗಿದ್ದ. ಅವನು ನೆಲಕ್ಕೆ ಒಂದು ತೆಳುವಾದ ಬಟ್ಟೆ ದಿನಪತ್ರಿಕೆ ಹಾಕಿಕೊಂಡು ಮೇಲೆ ಹರಿದುಹೋಗಿರುವ ಸಣ್ಣ ಟವಲ್ಲಿನಷ್ಟೇ ದೊಡ್ಡದಾದ ಒಂದು ಬಟ್ಟೆಯನ್ನು ಹೊದ್ದು ಮಲಗಿದ್ದ. ಅದು ಕಾಲಿಗಾದರೆ ತಲೆಗಾಗದಂತೆ ಇತ್ತು. ಬೆಂಗಳೂರಿನ ಈ ಚಳಿಗಾಲದ ಚಳಿಯಲ್ಲಿ ಆತನ ಸ್ಥಿತಿ ನೋಡಿ ನಮಗಂತೂ ಕರಳು ಕಿತ್ತು ಬಂದಂತಾಯಿತು. ನನ್ನಾಕೆಯಂತೂ ಮನೆಗೆ ಹೋಗಿ ನಮಗೆ ಬೇಕಿಲ್ಲದ ರಗ್ಗು ಕಂಬಳಿ ಮತ್ತು ಬಟ್ಟೆಗಳನ್ನು ಮನೆಯಿಂದ ತಂದು ಕಂಬಳಿ ಮತ್ತು ರಗ್ಗು ಎರಡನ್ನು ಒಟ್ಟುಮಾಡಿ ಆ ಮುದುಕನಿಗೆ ಹೊದಿಸಿ ಉಳಿದ ಬಟ್ಟೆಗಳನ್ನು ಅವನ ತಲೆಬಳಿ ಇಟ್ಟು ಬಂದಳು. ಅದರ ನಂತರವಷ್ಟೇ ನಮಗೆ ಸಮಾಧಾನವಾಗಿದ್ದು. ಇಲ್ಲಿ ನಿಮ್ಮ ಬ್ಲಾಗಿನ ಚಿತ್ರಗಳು ಇದೇ ಪರಿಸ್ಥಿತಿಯನ್ನು ತೋರಿಸುತ್ತಿರುವುದರಿಂದ ನನಗೆ ಇದನ್ನು ಹೇಳಬೇಕೆನಿಸಿತು.
ಮತ್ತೊಂದು ವಿಷಯ ನನ್ನ ಎರಡು ಬ್ಲಾಗಿನಲ್ಲಿ ಹೊಸ ವಿಚಾರಗಳನ್ನು ಹಾಕಿದ್ದೇನೆ. ಬಿಡುವು ಮಾಡಿಕೊಂಡು ಬನ್ನಿ.
Post a Comment