ಕಳೆದ ಭಾನುವಾರ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಬರಲಿ ಎಂದು ಜಪಿಸುತ್ತ ಕುಳಿತಿದ್ದೆ. ಮಳೆಯೇನೋ ಬಂತು ಆದರೆ ಪಂದ್ಯ ನಿಲ್ಲುವಷ್ಟು ಬರ್ಲಿಲ್ಲ. ನಿಮಗೆ ಆಶ್ಚರ್ಯ ಆಗಬಹುದು ಎಲ್ಲರು ಪಂದ್ಯ ನಡೆಯಲಿ ಎಂದು ಕಾಯುತ್ತಿದ್ದಾರೆ ಇವನು ಮಳೆ ಬರಲಿ ಎಂದು ಕಾಯುತ್ತಿದ್ದಾನೆ ಎಂದು. ಅದಕ್ಕೆ ಒಂದು ಕಾರಣವಿದೆ. ನಾನು ಕ್ರಿಕೆಟ್ ಪ್ರೇಮಿಯೇ, ಆದರೆ ಇಡಿ ರಾಜ್ಯ ವಿದ್ಯುತ್ ಕೊರತೆ ಎದುರಿಸಿತ್ತಿರುವಾಗ ಇಲ್ಲಿ ಕೇವಲ ಮನೋರಂಜನೆಗೊಸ್ಕರ ಒಂದು ಕ್ರಿಕೆಟ್ ಪಂದ್ಯವನ್ನು ರಾತ್ರಿ ಇಡಿ ವಿದ್ಯುತ್ ಉರಿಸಿ ಆಡಿಸುವ ಅಗತ್ಯತೆ ಬಗ್ಗೆ ನನಗೆ ಬೇಸರವಿದೆ. ಬಿ.ಸಿ.ಸಿ.ಐ ಅವರು ವಿದ್ಯುತ್ ನ ಹಣವನ್ನು ಪಾವತಿಸಬಹುದು. ಆದರೆ ವಿದ್ಯುತ್ ಒಂದು ನವೀಕರಿಸಲಾಗದ ಶಕ್ತಿಯ ಮೂಲ ಎನ್ನುವ ವಿಷಯವನ್ನು ನಾವು ಮರೆಯಬಾರದು. ಎಷ್ಟು ಹಣ ಕೊಟ್ಟರೂ ಬಳಸಿದ ವಿದ್ಯುತ್ ಮತ್ತೆ ದೊರಕುವುದಿಲ್ಲ ಎಂಬುದು ಸತ್ಯ. ರಾಜ್ಯಕ್ಕೆ ೧೭೦೦ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ, ೪೦೦ ಕೋಟಿ ವೆಚ್ಚದಲ್ಲಿ ವಿದ್ಯುತ್ತನ್ನು ಹೊರ ರಾಜ್ಯಗಳಿಂದ ಖರೀದಿ ಮಾಡುತ್ತಿರುವುದಾಗಿ ಮಾನ್ಯ ಸಚಿವರು ಅದೇ ದಿನದಂದು ಘೋಷಿಸಿದ್ದರು. ವಿದ್ಯಾರ್ಥಿಗಳು, ಜನಸಾಮಾನ್ಯರು ವಿದ್ಯುತ್ ಇಲ್ಲ ಎಂದು ತಲೆ ಕೆಡಿಸಿಕೊಂಡರೆ ಇವರಿಗೆ ಪಂದ್ಯ ನಡೆಸುವ ಬಗ್ಗೆ ಯೋಚನೆ. ಮನೋರಂಜನೆ ಬೇಕು ಆದರೆ ಅದಕ್ಕಾಗಿ ಅನಾವಶ್ಯಕವಾಗಿ ಖರ್ಚು ಮಾಡುವುದು ಸರಿಯಲ್ಲ ಎಂದು ನನ್ನ ಭಾವನೆ.
ಇದೆ ರೀತಿಯ ಇನ್ನೊಂದು ದುಂದು ವೆಚ್ಚದ ಆಟ ಫಾರ್ಮುಲ ಒನ್ ರೇಸಿಂಗ್. ಸುಮಾರು ೨೦ ಕಾರುಗಳು ೩೦೦ ಕಿಲೋ ಮೀಟರ್ ಗೂ ಜಾಸ್ತಿ ದೂರವನ್ನು ಅರ್ಥವಿಲ್ಲದೆ ಸುತ್ತುತ್ತವೆ. ಅಷ್ಟು ಸುತ್ತುವಷ್ಟರಲ್ಲಿ ಎಷ್ಟು ಪೆಟ್ರೋಲ್ ಖರ್ಚಗಿರುತ್ತೋ ದೇವರೇ ಬಲ್ಲ. ಸಧ್ಯಕ್ಕೆ ಈ ಆಟ ಇನ್ನು ಭಾರತಕ್ಕೆ ಕಾಲಿಟ್ಟಿಲ್ಲ, ೨೦೧೧ ಅಷ್ಟರಲ್ಲಿ ಇಲ್ಲೂ ಅದು ಪ್ರಾರಂಭವಾಗುತ್ತದೆ. ಹುಡುಕಿದರೆ ಇಂತ ಅನಾವಶ್ಯಕ ಮನೋರಂಜನೆಗಳು ಬಹಳಷ್ಟು ಸಿಗುತ್ತವೆ, ಯೋಚಿಸಿ ಈ ವಿಷಯಗಳ ಬಗ್ಗೆ.
8 comments:
ಈ ಹಿಂದೆ ಸರ್ಕಾರ ಮಾಡಿದ ಮಂತ್ರಿಗಳಿಗೆ ಮುಂದೆ ಈ ಸಮಸ್ಯೆ ಬರುತ್ತದೆ ಎಂದು ಗೊತ್ತಿರಲಿಲ್ಲವೆ?
"ಈ ವಿದ್ಯುತ್ ಸಮಸ್ಯೆ ಪರಿಹರಿಸಲು ಎರಡು ಸಾವಿರ ಕೋಟಿ ಬೇಕು, ಫಲ ನನಗೆ ಸಿಗುವದಿಲ್ಲ..!
ಮುಂದೆ ಬರುವವರು ಪರಿಹರಿಸಿ ಕೊಳ್ಳಲಿ..!
ಆ ಹಣದಿಂದ ಜನಪ್ರೀಯ ಕಾರ್ಯಕ್ರಮಗಳನ್ನು ಮಾಡಿದರೆ ಕೆಲವು ಓಟು ಖರಿದಿಸಬಹುದಲ್ಲ..!"
ನಮ್ಮ ರಾಜಕೀಯ ವ್ಯವಸ್ಥೆ ಸರಿ ಆಗಬೇಕು.
ಕ್ಷಮಿಸಿ... ನಾವು ಮಾಡಬೇಕು..
ಚೆನ್ನಾಗಿ ಬರೆದಿದ್ದೀರಿ,, ಧನ್ಯವಾದಗಳು...
ನಿಜವಾಗಿಯೂ ಹೌದು.. ಭಯೋತ್ಪಾದನೆ, ವಿದ್ಯುತ್ ಕೊರತೆ, ಪೆಟ್ರೋಲ್ ಕೊರೆತೆ ಇತ್ಯಾದಿ ಸಮಸ್ಯೆಗಳಿಗೆಲ್ಲಾ.. ನೊಮ್ಮೊಳಗಿನ ಆಲಸಿತನ, ರಾಜಕಾರಣಿಗಳ ದುರಾಸೆಯೇ ಕಾರಣ. ಎಂದು ಜನತೆ ಎಚ್ಚೆತ್ತುಕೊಳ್ಳುವುದೋ ಕಾಣೆ!..:( ಕಣ್ತೆರೆಸುವ ಲೇಖನ..
ನಿಜ ಶರಶ್,
ಮನರಂಜನೆಗಾಗಿ ಸಂಪನ್ಮೂಲಗಳನ್ನು ಖರ್ಚುಮಾಡಬೇಕಾ ಅನ್ನುವುದು ಚಿಂತಿಸಬೇಕಾದ ವಿಚಾರ.
ಎಲ್ಲಕ್ಕಿಂಥ ಮುಖ್ಯವಾದ್ದು man-hour losses ಅಲ್ವೆ ಶರಶ್? ಅದಕ್ಕೆ ಹೇಗೆ ಬೆಲೆ ಕಟ್ಟಲಾದೀತು?
ಪ್ರಕಾಶಣ್ಣ,
ರಾಜಕಾರಣಿಗಳನ್ನು ದೂರುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ನನ್ನ ಅಭಿಮತ. ನಾವೇ ಆರಿಸಿದವರು ಅವರು. ಮೊದಲು ರಾಜಕಾರಣಿಗಳಿಗೆ ಕನಿಷ್ಠ ಮಟ್ಟದ ವಿದ್ಯಾರ್ಹತೆ ಇರಬೇಕು ಮತ್ತು ಸಂಸ್ಕಾರ ಬಹಳ ಮುಖ್ಯ. ಇದಾವುದು ಈಗಿನ ರಾಜಕಾರಣಿಗಳಲ್ಲಿ ಕಾಣುವುದಿಲ್ಲ. ಎರಡನೇ ವಿಷಯವೆಂದರೆ, ನಾವು ನಮ್ಮ ಕಯ್ಯಲ್ಲಿ ಎಷ್ಟು ಸಾಧ್ಯವೋ ಅಸ್ತು ದುಂದು ವೆಚ್ಚವನ್ನು ಕಡಿಮೆ ಮಾಡಬೇಕು. ಯಾವುದು ಅಗತ್ಯ ಯಾವುದು ಅನಗತ್ಯ ಎಂದು ಗುರುತಿಸುವ ವಿವೇಕ ಇಟ್ಟುಕೊಳ್ಳಬೇಕು.
ತೇಜಕ್ಕ,
ಜನತೆ ಎಚ್ಚೆತ್ತುಕೊಳ್ಳುವ ಸಮಯ ಬೈಂದು ಈಗ ಅನ್ಸ್ತು. ಕೊನೆ ಪಕ್ಷ ಮುಂಬೈ ಘಟನೆ ಇದಕ್ಕೆ ದಾರಿ ಮಾಡಿಕೊಟಿದು. ಇದಕ್ಕಾಗಿ ನೂರಾರು ಜನ ಪ್ರಾಣ ತೆರ ಹಂಗಾತು ಅನ್ನದು ಖೇದದ ವಿಚಾರ.
ರಂಜಿತ್,
ಪ್ರಪಂಚದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲೂ ಜನರು ಐಶರಾಮಿ ಜೀವನ ಕ್ರಮದ ಕಡೆಗೆ ಒಲವು ತೋರುತ್ತಿರುವುದನ್ನು ನೋಡಿದರೆ ಆಶ್ಚರ್ಯ ಹಾಗು ಭಯ ಎರಡು ಒಟ್ಟಿಗೆ ಆಗುತ್ತಿದೆ ನನಗೆ. ನೀವು ಹೇಳಿದಂತೆ man-hour ಹಾಗು man-power ಎರಡೂ ನಷ್ಟವಾಗುತ್ತಿದೆ.
ಪ್ರಿಯ ಬ್ಲಾಗ್ ಸ್ನೇಹಿತರೇ,
ಪರೀಕ್ಷೆಯ ಕಾರಣದಿಂದ ಇನ್ನೊಂದು ತಿಂಗಳು ನಿಮ್ಮ ಕಾಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರೀತಿ ನನ್ನ ಬರವಣಿಗೆಗಳ ಮೇಲೆ ಸದಾ ಹೀಗೆ ಇರುತ್ತದೆ ಎಂದು ನಂಬಿದೀನೆ.
ನಿಮ್ಮ ಪ್ರೀತಿಯ,
ಶರಶ್ಚಂದ್ರ ಕಲ್ಮನೆ
ಪ್ರೀತಿಯ ಶರತ್...
ಈ ರಾಜಕಾರಣಿಗಳಿಗೆ ಸಂಸ್ಕಾರ ಇಲ್ಲ ಅಂತ ನೀವೆ ಹೇಳುತ್ತಿದ್ದೀರಿ..ನಮ್ಮ ಕ್ಷೇತ್ರದಲ್ಲಿ ಈ ಸಾರಿ ಚುನಾವಣೆಯಲ್ಲಿ ಆಯ್ಕೆಗೆ(ಪಕ್ಷ ಭೇದ ಬಿಟ್ಟು) ಯಾವುದೇ ಓಳ್ಳೆಯ ಅಭ್ಯರ್ಥಿ ಇಲ್ಲವಾಗಿತ್ತು. ಯಾರಿಗಾದರೂ ಓಟು ಕೊಡಲೇ ಬೇಕಾಗಿತ್ತಲ್ಲವೇ?
ಏನು ಮಾಡೋಣ ಹೇಳು..?
ಏನೂ ಮಾಡಬೇಕಾಗಿಲ್ಲ..
ಚೆನ್ನಾಗಿ, ಮನಸ್ಸು ಕೊಟ್ಟು ಓದು..
ಆಮೇಲೆ ಚರ್ಚೆ ಮಾಡೋಣ..
ಶುಭವಾಗಲಿ..
- ಪ್ರಕಾಶಣ್ಣ-
ಪರೀಕ್ಷೆ ಚೆನ್ನಾಗಿ ಬರಿ.. All the best!
ಒಳ್ಳೆ ವಿಷಯನ ಚರ್ಚೆಗೆ ತಗಂಡ್ ಬೈಂದೆ... :-)
ಶರತ್,
ನಾನು ಇದನ್ನು ಯೋಚಿಸಿರಲಿಲ್ಲ. ನಿಮ್ಮ ಅಲೋಚನೆ ಸರಿ ಇದೆ. ಹೇಗೋ ಕ್ರಿಕೆಟನ್ನು ಸಹಿಸಿಕೊಳ್ಳಬಹುದು. ಆದರೆ ಫಾರ್ಮುಲ ೧ ಅಂತೂ ನಮ್ಮ ದೇಶಕ್ಕೆ ಬರಲೇ ಬಾರದು ಅನ್ನಿಸುತ್ತದೆ. ಈಗಿನ ಪೆಟ್ರೋಲ್ ಮೂಲ ಖಾಲಿಯಾಗುತ್ತಿರುವುದಕ್ಕೆ ನಾವು ಚಿಂತಿಸಬೇಕಾಗಿದೆ.
ಶರತ್
ಒಬ್ಬೊಬ್ಬರಿಗೆ ಒಂದು ಹವ್ಯಾಸ ಇರುತ್ತೆ ,ಆದರೆ ಪೆಟ್ರೋಲ್ ವಿದ್ಯುತ್ ಖರ್ಚು ಆಗುತ್ತೆ ಅಂಥ ಹವ್ಯಾಸ ಬಿಡೋಕೆ ಆಗಲ್ಲ.
ನಿಮ್ಮಂಥ ಸಾವಿರಾರು ಜನರಿಗೆ ಬ್ಲಾಗ್ ಬರೆಯೋ ಹವ್ಯಾಸ ಇದೆ, ಹಾಗೇ ಬ್ಲಾಗ್ ಬರೆಯೋಕೆ ಕಂಪ್ಯೂಟರ್ ಉಪಯೋಗಿಸುವಾಗ ವಿದ್ಯುತ್ ಖರ್ಚು ಆಗುತ್ತೆ ಅಂಥ ನಿಮ್ಮ ಹವ್ಯಾಸ ಬಿಡ್ತೀರ ?
---
Chatesh
Post a Comment