Friday, January 2, 2009

ಹನಿಗಳು

ಪರೀಕ್ಷೆಯ ಸಮಯದಲ್ಲಿ ಬರೆದ ಕೆಲವು ಹನಿಗಳು ಇವು.

ಪ್ರೀತಿಯೆಂಬ ದೀಪವು
ಬಾಳಿಗೆ ಬೆಳಕನ್ನು ತೋರದೆ
ಬಾಳನ್ನು ಸುಡುತಲಿರೆ
ಪ್ರೀತಿ ಎಂಬ ಪದಕ್ಕೆ ಅರ್ಥ ಉಳಿಯಿತೇ?


ಹೃದಯದ ಅಂಗಳದಲಿ
ಬೇಸರದ ಮಳೆ ಜಡಿಯುತಿರಲು
ಜೊತೆಗೆ ಏಕಾಂತದ ಗೆಳೆತನವಿರಲು
ಆಗಸ ತಿಳಿನೀಲಿಯಾಗುವುದೆಂದು ?


ನನ್ನೆದೆಯೊಳಗೊಂದು ನೋವಿನ ಕೊಳ
ಎಂದು ಅರಿಯುವೆ ಈ ನೋವ ನೀನು
ಹೇಳದೆ ಉಳಿದ ಮಾತುಗಳು ಬಹಳ
ಎಂದು ಆಲಿಸುವೆ ಈ ಮಾತುಗಳ ನೀನು


ಹೀಗೆ ಏಕಾಂತದ ಸಂಜೆಯಲ್ಲಿ
ನೆನಪೊಂದು ಮೂಡಿರಲು ಮನದ ಪರದೆಯಲಿ
ಮೊಗದಲಿ ಇಣುಕಿರಲು ಕಿರುನಗೆಯೊಂದು
ನೆಪವಾಯಿತೀಗ ಇರಲು ಸಂತಸದಲಿ


ಕಣ್ಣ ಹನಿಗಳೇ ಬದುಕಾಗಿದೆ
ವಿರಹವೆಂಬ ನೋವು ಶುರುವಾದಮೇಲೆ
ನೆನಪುಗಳೇ ಉಸಿರಾಗಿದೆ
ನಿನ್ನ ಸವಿ ಮಾತುಗಳು ಅಳಿದ ಮೇಲೆ

6 comments:

Ittigecement said...

ಶರತ್...

ಹೊಸವರ್ಷ ಹರ್ಷ ತರಲಿ..

ಪರೀಕ್ಷೆಗಳು ಹೇಗಾದವು..?

ಚಂದದ ಕವನ...

ಭಾವನೆಗಳು..
ಸಮರ್ಥವಾಗಿ ವ್ಯಕ್ತವಾಗಿದೆ...

ನನಗಿಷ್ಟವಾಯಿತು..

ಅಭಿನಂದನೆಗಳು..

shivu.k said...

ಶರತ್,
ಹೊಸ ವರುಷ ಸಂತಸ ತರಲಿ..

ನಿಮ್ಮ ಪರೀಕ್ಷೆ ಚೆನ್ನಾಗಿ ಆಯ್ತಾ ....

ಕವನವು ಚೆಂದವುಂಟು. ಭಾವಾರ್ಥದಲ್ಲಿ ತೂಕವಿದೆ...
ಇನ್ನಷ್ಟು ಹೊಸತು ಬರಲಿ....

ತೇಜಸ್ವಿನಿ ಹೆಗಡೆ said...

ಶರತ್,

ಎಂತ ಮಾರಾಯ.. ಪರೀಕ್ಷೆಲಿ ಓದಿದ್ದಕ್ಕಿಂತ ಪ್ರೀತಿ ಬಗ್ಗೆ ಯೋಚ್ಸಿದ್ದೇ ಜಾಸ್ತಿಯಾದಾಂಗೆ ಕಾಣ್ತು!!? :) ಸುಮ್ನೆ ಕೇಳ್ದಿ.. ಬೇಜಾರಾಗಡ. ಕವನ ಚೊಲೋ ಇದ್ದು. ಶುಭವಾಗಲಿ.

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ,
ಕವನ ಬರ್ಯದು ತುಂಬಾ ಕಷ್ಟ ಅನ್ಸ್ತು ನಂಗೆ, ಅಷ್ಟೊಂದು ಇಷ್ಟನು ಆಗ್ತಲ್ಲೆ ನಂಗೆ :) ಸುಮ್ನೆ ಒಂದು ಪ್ರಯತ್ನ ಮಾಡಿದ್ದಿ ಅಷ್ಟೆ. ಪರೀಕ್ಷೆ ಎಲ್ಲ ಚನಾಗಿ ಆತು. ಧನ್ಯವಾದಗಳು ನಿನ್ನ ಪ್ರೋತ್ಸಾಹಕ್ಕೆ. ನಿಂಗೂ ಹೊಸ ವರ್ಷದ ಶುಭಾಶಯಗಳು.


ಶಿವು ಸರ್,
ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಪರೀಕ್ಷೆಗಳೆಲ್ಲ ಚನ್ನಾಗಿ ಆದವು. ಹೊಸ ಕವನಗಳನ್ನ ಬರೆಯಲು ಪ್ರಯತ್ನಿಸುತ್ತೇನೆ.


ತೇಜಕ್ಕ,
ಅದು ಒಂಥರಾ ಹಂಗೇಯ, ಪರೀಕ್ಷೆ ಸಮಯದಲ್ಲಿ ಓದದೊಂದು ಬಿಟ್ಟು ಬೇರೆ ಸಕಲ ಯೋಚನೆಗಳೂ ಬತ್ತು :) ಬೇಜಾರೆನು ಇಲ್ಲೆ. ನಿನ್ನ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.

Radhika Nadahalli said...

ಹನಿಗಳು ಚೊಲೋ ಇದ್ದು..ಹೀಗೇ ಕವನಗಳನ್ನು ಬರಿತಾ ಇರಿ... :)
ಬರ್ಯಕ್ಕೆ ಹೊತ್ತು ಗೊತ್ತು ಇಲ್ಲೆ ಅಲ್ದಾ...ಅನ್ಸಿದಾಗ ಬರ್ಯಕ್ಕು ಅಷ್ಟೆ...ಅಂತ ನನ್ನ ಅನಿಸಿಕೆ...

ಧರಿತ್ರಿ said...

ಶರತ್ ಚಂದ್ರ ...
ಪರೀಕ್ಷೆ ಚೆನ್ನಾಗಿ ಬರೆದ್ರಲ್ಲಾ....(:)
-ಧರಿತ್ರಿ