Saturday, January 3, 2009

ಒಂದಿಷ್ಟು ಚಿತ್ರಗಳು










ನಾನು ಇತ್ತೇಚೆಗೆ ಬಿಡಿಸಿದ ಚಿತ್ರಗಳು ಇವು. ಕೃಷ್ಣನ ಚಿತ್ರ ಅಪೂರ್ಣವಾಗಿದೆ. ಪರೀಕ್ಷೆಯ ಸಮಯದಲ್ಲಿ ಹಠಾತ್ತನೆ ಚಿತ್ರಕಲೆ, ಸಾಹಿತ್ಯದ ಬಗ್ಗೆ ನನಗೆ ಆಸಕ್ತಿ ಮೂಡುತ್ತದೆ, ಹತ್ತಿಕ್ಕಲು ಪ್ರಯತ್ನ ಪಟ್ಟು ಸೋಲುತ್ತೇನೆ. ಆದ್ದರಿಂದ ಸಣ್ಣ ಸಣ್ಣ ಚಿತ್ರಗಳನ್ನು ಬಿಡಿಸಿ ಓದಿಗೂ ಆಸಕ್ತಿಗೂ ಸಮಾನ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಇವು.

11 comments:

ranjith said...

ನಿಜವಾಗಿಯೂ ಚೆನ್ನಾಗಿ ಚಿತ್ರ ಬಿಡಿಸ್ತೀರಿ ಶರತ್.

ಕೃಷ್ಣನ ಚಿತ್ರ ಪೂರ್ಣವಾದ ಮೇಲೆ ಹಾಕಿದ್ದರೆ ಇನ್ನೂ ಚೆನ್ನಾಗಿತ್ತು..

ಚಿತ್ರಾ ಸಂತೋಷ್ said...

ಶುಭವಾಗಲಿ..ಚೆನ್ನಾಗಿ ಬರೀತೀರಿ..
-ಚಿತ್ರಾ

ತೇಜಸ್ವಿನಿ ಹೆಗಡೆ said...

ಮೊದಲ ಹಾಗೂ ಕೊನೆಯ ಚಿತ್ರ ರಾಶಿ ಇಷ್ಟವಾತು. ಕೃಷ್ಣನ ಚಿತ್ರ ಪೂರ್ಣ ಆಜಿಲ್ಯ? ಆದ ಮೇಲೆ ಹಾಕು ಮತ್ತೊಂದ್ಸಲ.

Ashok Uchangi said...

ಪ್ರಿಯರೇ
ಮೊದಲ ಚಿತ್ರ ನಿಮ್ಮ ಭಾವಚಿತ್ರದಂತೆ ಕಾಣುತ್ತದೆ.ಪ್ರಯತ್ನ ಚೆನ್ನಾಗಿದೆ.ಮುಂದುವರೆಸಿ.
ಅಶೋಕ ಉಚ್ಚಂಗಿ
http://mysoremallige01.blogspot.com/

ಪಲ್ಲವಿ ಎಸ್‌. said...

ಚಿತ್ರಗಳು ತುಂಬಾ ಚೆನ್ನಾಗಿವೆ ಶರತ್‌. ಇದನ್ನೇ ನಿಯಮಿತವಾಗಿ ಏಕೆ ಮುಂದುವರಿಸಬಾರದು? ಒಂದು ಚಿತ್ರ ಹೇಳಬಹುದಾದ ತೀವ್ರತೆಯನ್ನು ಬರಹದಲ್ಲಿ ಬಿಂಬಿಸುವುದು ಬಹಳ ಕಷ್ಟ.

ನಿಮ್ಮ ಚಿತ್ರಯಾನ ಸುಲಲಿತವಾಗಿ ನಡೆಯಲಿ.
- ಪಲ್ಲವಿ ಎಸ್‌.

ಶರಶ್ಚಂದ್ರ ಕಲ್ಮನೆ said...

ರಂಜಿತ್,
ಧನ್ಯವಾದಗಳು :) ಕೃಷ್ಣನ ಅಪೂರ್ಣ ಚಿತ್ರ ಎಲ್ಲೋ ಕಳೆದು ಹೋಗಿದೆ, ಮತ್ತೆ ಪೂರ್ತಿ ಬಿಡಿಸಿ ಅಪ್ ಲೋಡ್ ಮಾಡ್ತೀನಿ.


ಚಿತ್ರಾ,
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.


ತೇಜಕ್ಕ,
ಕೃಷ್ಣನ ಚಿತ್ರ ಮತ್ತೆ ಬಿಡಿಸಿ ಅಪ್ಲೋಡ್ ಮಾಡ್ತಿ.


ಅಶೋಕ್,
ಭಾವಯಾನಕ್ಕೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಅದು ನನ್ನ ಭಾವಚಿತ್ರ ಅಲ್ಲ :)


ಪಲ್ಲವಿ,
ಇದು ನನ್ನ ಬಾಲ್ಯದಿಂದ ಬಂದ ಹವ್ಯಾಸ, ಬೇರೆ ಬೇರೆ ತರದ ಪ್ರಯೋಗಕ್ಕೆ ಇನ್ನು ಕೈ ಹಾಕಿಲ್ಲ, ಪರಿಸರದ ಚಿತ್ರಗಳನ್ನು ಇನ್ನು ಪ್ರಯತ್ನಿಸಿಲ್ಲ, ಪೆನ್ಸಿಲ್ ಸ್ಕೆಚಿಂಗಲ್ಲೇ ಕಲಿಯೋದು ತುಂಬಾ ಇದೆ. ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.

shivu.k said...

ಶರತ್,
ನಿಜಕ್ಕೂ ನಾನು ನಿಮ್ಮ ಚಿತ್ರಗಳ ಅಭಿಮಾನಿ.... ನಿಮ್ಮ ಚಿತ್ರಗಳಲ್ಲಿ ಒಂದು ಹದವಾದ ಹಿಡಿತವಿದೆ....ನನಗೂ ಚಿತ್ರ ಬಿಡಿಸುವಾಸೆ...ನಾನು ನನ್ನ ಇತ್ತೀಚಿನ ಒಂದು ಲೇಖನಕ್ಕೆ ಇದೇ ರೀತಿ ರೇಖ ಚಿತ್ರ ಬಿಡಿಸಿದ್ದೇನೆ..[ಬ್ಲಾಗ್ ಕ್ಯಾಮೆರಾ ಹಿಂದೆ] ನೀವು ಬಿಡುವು ಮಾಡಿಕೊಂಡು ಬಂದು ನೋಡಿ.. ಅಭಿಪ್ರಾಯ ತಿಳಿಸಿ...

Ittigecement said...

ಶರತ್..

ಪ್ರೊಮೊಷನ್ ಆಗಿದ್ದಕ್ಕೆ ಅಭಿನಂದನೆಗಳು...
ನಿನ್ನಣ್ಣ , ಅತ್ತಿಗೆ ಬಿಡಿಸಿದ ಚಿತ್ರವೂ ಚಂದವಾಗಿದೆ..!

ಬಿಡಿಸಿದ ಚಿತ್ರಗಳೆಲ್ಲವೂ.. ಹೊಟ್ಟೆಕಿಚ್ಚು ಆಗುವಷ್ಟು ಚೆನ್ನಾಗಿದೆ...
ಹುಡುಗಿ ಕನಸಿನಲ್ಲಿ ಬರುವವಳೆ..?

ದಯವಿಟ್ಟು ಮುಂದುವರೆಸು..

ಚಂದದ ಚಿತ್ರಗಳಿಗೆ ಮತ್ತೊಮ್ಮೆ ಅಭಿನಂದನೆಗಳು...

Rajesh Manjunath - ರಾಜೇಶ್ ಮಂಜುನಾಥ್ said...

ಶರತ್,
ಎಲ್ಲ ಚಿತ್ರಗಳು ಚೆನ್ನಾಗಿವೆ, ಕೃಷ್ಣನ ಚಿತ್ರ ಪೂರ್ಣವಾದ ಕೂಡಲೇ ಇಲ್ಲಿ ಅಪ್ಲೋಡ್ ಮಾಡಿ. ನಿಮ್ಮ ಚಿತ್ರಲೋಕದಲ್ಲಿ ನಮ್ಮ ಪಯಣ ಹೀಗೆ ಸಾಗುವಂತಾಗಲಿ ನಿಮ್ಮ ಚಿತ್ರಗಳ ಜೊತೆಗೆ...
-ರಾಜೇಶ್ ಮಂಜುನಾಥ್

ಮನಸ್ವಿ said...

೩ ಚಿತ್ರಗಳೂ ಚನ್ನಾಗಿವೆ.. ಅಂದಹಾಗೆ ೨ನೇ ಸ್ಕೆಚ್ಚು ಉಪೇಂದ್ರನ ಹೆಂಡತಿಯದ್ದಾ??!

ಮನಸಿನ ಮಾತುಗಳು said...

Nice paintings...:-)