ನನಗೆ ಕಾಡು ಹೂವುಗಳೆಂದರೆ ಇಷ್ಟ... ಅವುಗಳ ಆಕಾರ, ಬಣ್ಣ, ವಿವಿಧತೆ ನನ್ನಲ್ಲಿ ಯಾವಾಗಲೂ ಅಚ್ಚರಿ ಹುಟ್ಟಿಸುತ್ತವೆ. ನಾನು ಚಾರಣಕ್ಕೆ ಹೋದಾಗಲೆಲ್ಲ ನನ್ನ ಕಣ್ಣುಗಳು ಹೊಸ ಬಗೆಯ ಕಾಡು ಹೂಗಳನ್ನು ಹುಡುಕುತ್ತಿರುತ್ತವೆ. ಹಲವಾರು ಬಾರಿ ಕಾಡು ಹೂಗಳು ತುಂಬಾ ಚಿಕ್ಕದಾಗಿದ್ದು ನನ್ನ ಕ್ಯಾಮೆರಾದ ವಿಸ್ತರಣ ಸಾಮರ್ಥ್ಯಕ್ಕೂ ಸಿಗದೇ ನಿರಾಸೆಗೊಂಡಿದ್ದೇನೆ. ಕೆಲವು ಬಾರಿ ತೆಗೆಯಬೇಕಾದ ಹೂವು ಸರಿಯಾದ ಕೋನದಲ್ಲಿ ಇರದೇ, ಸರಿಯಾದ ಬೆಳಕಿಗಾಗಿ, ಕೋನಗಳಿಗಾಗಿ ಒದ್ದಾಡುತ್ತಾ ನನ್ನ ಸಹ ಚಾರಣಿಗರ ತಾಳ್ಮೆಯನ್ನು ಪರೀಕ್ಷಿಸಿದ್ದೇನೆ. ಆದರೆ ಈಗಲೂ ಬೇಸರವಾದಗೆಲ್ಲ ಈ ಹೂವುಗಳ ನೋಡುತ್ತಾ ಇವುಗಳ ಬಣ್ಣಗಳಿಗೆ ಮಾರು ಹೋಗುತ್ತೇನೆ. "ಕಾಡು ಹೂವುಗಳು" ಸರಣಿಯಲ್ಲಿ ನನಗೆ ಸಿಕ್ಕ ಕಾಡು ಹೂವುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ಕುಮಾರಪರ್ವತ ಚಾರಣಕ್ಕೆ ಹೋದಾಗ ಸಿಕ್ಕ ಕೆಲ ಕಾಡು ಹೂಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದೇನೆ... ನೋಡಿ ಬಣ್ಣಗಳನ್ನು ಕಣ್ಣಲ್ಲಿ ತುಂಬಿಸಿಕೊಳ್ಳಿ :)
13 comments:
ಶರತ್,
ಹೂವುಗಳು ಚೆನ್ನಾಗಿ ಬಂದಿವೆ. ಫೋಟೋಗ್ರಫಿಯ ತಾಂತ್ರಿಕತೆಯಲ್ಲಿ ನನ್ನ ಜ್ಞಾನಮತ್ತೆ ತೀರ ಬಾಲಿಶ. ಒಬ್ಬ ನೋಡುಗನಾಗಿ ಎಲ್ಲಾ ಹೂವುಗಳು ಕಣ್ಣು ಸೆಳೆಯುತ್ತವೆ.
ನಮ್ಮ ನಗರಗಳಲ್ಲಿ ಸಿಗುವ ಕೆಲವೇ ಜಾತಿಯ ಹೂವುಗಳನ್ನು ನೋಡಿದ ನನಗೆ ನೀವು ಫೋಟೋಗಳಲ್ಲಿ ಕೊಟ್ಟ ಸುಂದರವಾದ ಕಾಡುಹೂವುಗಳನ್ನು ನೋಡಿ ತುಂಬ ಖುಶಿಯಾಯಿತು. ಧನ್ಯವಾದಗಳು.
ಕಾಡುವ ಕಾಡಿನ ಹೂಗಳ ಚಿತ್ರಗಳು ಸುಂದರವಾಗಿದೆ
Nice collections .. oorina nenapaytu :(
wah!!! nice.
I too like wild flowers :)
nice pics ...... :)
ಶರತ್ಚಂದ್ರ,
ದಿನವಿಡೀ 'ಯಾಂತ್ರಿಕ ಸಾಲು'ಗಳನ್ನು ನೋಡಿ ದಣಿದ ಕಣ್ಣುಗಳು ಕಾಡು ಹೂವುಗಳ 'ಮಾಂತ್ರಿಕ ಸೌಂದರ್ಯ' ನೋಡುತ್ತಾ ಆಹ್ಲಾದಗೊಂಡವು.. ಚಂದದ ಹೂವುಗಳು.. ಸುಂದರ ಫೋಟೋಗಳು !
-ದಿವ್ಯಾ.
ಚಿತ್ರಕಲೆ ಆಯ್ತು, ಬರಹ ಆಯ್ತು, ಚಾರಣ,ಸಂಗೀತ-ಸಿನೆಮಾ ಅಭಿರುಚಿ ಮತ್ತೆ ಈಗ ಫೋಟೋಗ್ರಫಿ...
ಇನ್ನೂ ಏನೇನೈತೆ ಸರ್ ನಿಮ್ಮ ಬತ್ತಳಿಕೇಲಿ?!
ಎಲ್ಲಾ ಫೋಟೋಗಳೂ ಮಸ್ತ್ ಆಗಿವೆ.
Hi Sharath,
Estella kaadu huvannu sere hididdera..
tumba tumba chennagide
nanna nenapina saalinalli omme serekolli
http://nenapinasalu.blogspot.com/
Pravi
ಇವು ನಿಜಕ್ಕೂ ಕಾಡುವ ಹೂಗಳು!
ಅಶೋಕ ಉಚ್ಚಂಗಿ
ಚಂದದ ಫೋಟೋಗಳು...ಕಾಡು ಹೂಗಳು ಚೆನ್ನಾಗಿವೆ..
ನಿಮ್ಮವ,
ರಾಘು.
ಶರತ್,
ಚಾರಣದಲ್ಲಿ ನೀವು ತೆಗೆದ ಕಾಡು ಹೂವುಗಳು ತುಂಬಾ ಚೆನ್ನಾಗಿವೆ...ತಾಂತ್ರಿಕತೆ ಬಗ್ಗೆ ತಲೆಕೆಡಿಸಿಕೊಳ್ಳದೇ ಸುಮ್ಮನೆ ಕ್ಲಿಕ್ಕಿಸುತ್ತಾ ಹೋಗುವ ಮಜವೆ ಬೇರೆ ಅಲ್ವಾ..
ಕಾಡು ಹೂವುಗಳು ಒಂದಕ್ಕಿಂತ ಒಂದು ಚೆನ್ನಾಗಿವೆ ಮತ್ತೆ ಮತ್ತೆ ಕಾಡುವಂತಿವೆ ...
Post a Comment