Sunday, November 14, 2010

ವರ್ಣ ಚಿತ್ರ - ಒಂದು ಪ್ರಯತ್ನ

ನಾನು ಚಿಕ್ಕವನಿರುವಾಗ ವರ್ಣ ಚಿತ್ರಗಳನ್ನು ಬಿಡಿಸುತ್ತಿದ್ದೆ. ಸ್ಕೆಚ್ ಪೆನ್ನು, ಪೇಷ್ಟೇಲ್ ಗಳು, ಜಲ ವರ್ಣಗಳು, ಬಣ್ಣದ ಪೆನ್ಸಿಲ್ಗಳು ಎಲ್ಲವನ್ನು ಉಪಯೋಗಿಸುತ್ತಿದ್ದೆ. ಹೈ ಸ್ಕೂಲ್ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತಿದ ಮೇಲೆ ಅದೇಕೋ ಬಣ್ಣಗಳ ಸಹವಾಸವೇ ದೂರವಾಗಿ ಹೋಯಿತು. ಕೇವಲ ಕಪ್ಪು-ಬಿಳಿಗಳ ಮಧ್ಯೆ ಮನಸ್ಸು ಉಳಿದು ಹೋಯಿತು. ಪೆನ್ಸಿಲ್ ಸ್ಕೆಚಿಂಗ್ ಹಾಗು ಶೇಡಿಂಗ್ ಒಂದು ರೀತಿಯಲ್ಲಿ ಸುಲಭವೂ ಹೌದು ಒಂದು ರೀತಿಯಲ್ಲಿ ಕಷ್ಟವೂ ಹೌದು. ವ್ಯಕ್ತಪಡಿಸಬೇಕಾದ ಚಿತ್ರವನ್ನು ಕೇವಲ ಕಪ್ಪು ಬಿಳುಪಿನಲ್ಲೇ ಹೇಳುವುದರಿಂದ ಬಣ್ಣಗಳ ಆಯ್ಕೆ ಹಾಗು ವಿನ್ಯಾಸಗಳ ತಲೆ ನೋವು ಇರುವುದಿಲ್ಲ ಸ್ಕೆಚಿಂಗ್ನಲ್ಲಿ. ಆದರೆ ಕೇವಲ ಎರಡೇ ಬಣ್ಣಗಳಲ್ಲಿ ಚಿತ್ರದ ಆಳ, ಸೂಕ್ಷ್ಮತೆ, ಹಾಗು ಭಾವನೆಗಳನ್ನು ತೋರಿಸುವುದೂ ತ್ರಾಸದಾಯಕವೇ. ಆದ್ದರಿಂದ ಯಾರಾದರೂ ಕೇಳಿದರೆ ಸ್ಕೆಚಿಂಗ್ ಕಷ್ಟವೋ ಸುಲಭವೋ ಎಂದು ಈಗಲೂ ಹೇಳಲಾರೆ.

ಕೆಲವು ತಿಂಗಳುಗಳ ಮಧ್ಯೆ ಹಲವಾರು ಗೆಳೆಯರು ನೀನು ಪೇಂಟಿಂಗ್ ಏಕೆ ಮಾಡುವುದಿಲ್ಲ ಎಂದು ಕೇಳಿದ್ದರು. ಅವರೆಲ್ಲರಿಗೂ ಒಂದು ಸಮಜಾಯಿಷಿಯ ಉತ್ತರ ಕೊಟ್ಟೆನಾದರೂ, ನನ್ನನ್ನೇ ನಾನು ಕೇಳಿಕೊಂಡಾಗ ಉತ್ತರ ನನ್ನಲ್ಲೂ ಇರಲಿಲ್ಲ. ಅದರ ಬಗ್ಗೆ ಜಾಸ್ತಿ ಯೋಚಿಸಲೂ ಇಲ್ಲ ಎನ್ನಿ. ನಿನ್ನೆ ಸುಮ್ಮನೆ ಕುಳಿತಿದ್ದಾಗ ಒಂದು ಯೋಚನೆ ಬಂದಿತು, ಯಾಕೆ ಒಂದು ವರ್ಣಚಿತ್ರ ರಚಿಸಬಾರದು ಎಂದು. ಆಗ ಮೂಡಿದ್ದೇ ಈ ಕೆಳಗಿನ ಚಿತ್ರ. ಇದನ್ನು ಒಂದು ರಫ್ ವರ್ಕ್ ಎನ್ನಬಹುದು. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ. ಈ ಚಿತ್ರ ರಚನೆಗೆ ಸ್ಕೆಚ್ ಪೆನ್, ಕ್ರೆಯಾನ್ಸ್, ಕಲ್ಲಿದ್ದಲು, ಹಾಗು ಪೆನ್ಸಿಲ್ ಬಳಸಿದ್ದೇನೆ. ವರ್ಣ ಚಿತ್ರ ಬಿಡಿಸಿದೆನೆಂದು ಮುಂದೆ ನನ್ನಿಂದ ವರ್ಣಚಿತ್ರಗಳನ್ನೇ ನಿರೀಕ್ಷಿಸಬೇಡಿ... ನನಗೆ ಈಗಲೂ ಕಪ್ಪು-ಬಿಳುಪಿನ ನಡುವಿನ ಆಟವೇ ಪ್ರಿಯವೆನಿಸುತ್ತಿದೆ. ವರ್ಣ ಚಿತ್ರಗಳನ್ನು ಬಿಡಿಸಿದರೂ ನಿಮ್ಮ ಮುಂದೆ ಇರಿಸುವೆ.





14 comments:

Dr.D.T.Krishna Murthy. said...

sharat chandra; I share your interest in sketching,though I have stopped sketching long back.If you have not yet purchased ADITYA CHARI'S
FIGURE STUDY BY GRACE PRAKASHAN,I suggest this book.Iam sure you would love the sketches in this book.
regards.

ಗೌತಮ್ ಹೆಗಡೆ said...

ಎನ್ ಲ್ಯಾಪ್ಟಾಪಿಗೆ ಒಳ್ಳೊಳ್ಳೆ ಬ್ಯಾಕ್ ಗ್ರೌಂಡ್ ಕೊಡ್ತಾ ಇದ್ದೇ :) ಹಿಂಗೆ ಮುಂದುವರೀಲಿ :)

Ranjita said...

Lovely Birds .. Superb sharath:)

ವಾಣಿಶ್ರೀ ಭಟ್ said...

wonderful.....
kandita ee kaleyannu belesikolli...mattu ulisikolli...

ಚುಕ್ಕಿಚಿತ್ತಾರ said...

nice..

ಮನಮುಕ್ತಾ said...

ಸು೦ದರ ಹಕ್ಕಿಗಳು..ಚೆನ್ನಾಗಿದೆ.ಚಿತ್ರ ಬಿಡಿಸುವ ಸು೦ದರ ಕಲೆಯನ್ನು ಮು೦ದುವರೆಸಿ..

ಪ್ರಗತಿ ಹೆಗಡೆ said...

ತುಂಬಾ ಸುಂದರವಾಗಿದೆ ಸರ್ ಹಕ್ಕಿಗಳ ವರ್ಣಚಿತ್ರ... ಧನ್ಯವಾದಗಳು..

ಮನಸಿನ ಮಾತುಗಳು said...

Love birds!!... cute one... :-)

ಪ್ರವೀಣ್ ಭಟ್ said...

Preeti hakkigaLU.. cholo iddu

Anonymous said...

sharath,
ninna chitragalige no comments inmele! simply superb..
-kodsra

ನಾಗರಾಜ ಭಟ್ಟ said...

ಬಣ್ಣದ ಚಿತ್ರ ಚೊಲೊ ಇದ್ದು ...
ನಿಮ್ಮ ಮುಂದಿನ ಚಿತ್ರಕ್ಕಾಗಿ ಕಾಯ್ತಾ ಇದ್ದೆ.

ದೀಪಸ್ಮಿತಾ said...

ಚೊಲೊ ಇದ್ದು ಚಿತ್ರ. ಹೀಗೆ ಮುಂದುವರೆಸಿ. ಡಿಜಿಟಲ್ ತಂತ್ರಜ್ನ್ಯಾನದ ಮಿತಿಮೀರಿದ ಬಳಕೆಯಿಂದ ಇಂಥ ಹವ್ಯಾಸಗಳು ಕ್ಷೀಣಿಸುತ್ತಿರುವಾಗ ಯಾರಾದರೂ ಆಸಕ್ತಿವಹಿಸುವುದು ನೋಡಿದರೆ ತುಂಬಾ ಸಂತೋಷವಾಗುತ್ತದೆ. ನಿಮಗೆ ಪ್ರತಿಭೆ ಇದೆ, ದಯವಿಟ್ಟು ಮುಂದುವರೆಸಿ

venkat.bhats said...

The combination of colours is very attractive n very natural, awsome dude. Even I wanna to ask u why not u try with colours too.. hope u will keep goin, waiting for ur nxt work.

-Love
Venki

ಸಂಧ್ಯಾ ಶ್ರೀಧರ್ ಭಟ್ said...

ನೀ ಬಣ್ಣವಾಗದಿರಲು
ಈ ಬದುಕಿನ ಹಾಳೆಯಲಿ..
ನಿನ್ನ ನೆನಪುಗಳು ಬೇರೆತಾಗಿವೆ..
ಬದುಕಿನ ಕಪ್ಪು ಬಿಳುಪು ಚಿತ್ರಗಳಲ್ಲಿ...

ಬಣ್ಣಗಳ ಲೋಕಕ್ಕಿಂತಾ.. ಕಪ್ಪು ಬಿಳುಪಿನ ಯಾನವೇ ಚಂದ...

ಚಂದದ ಚಿತ್ರ....