Friday, November 26, 2010

ಸಣ್ಣದೊಂದು ಸಂತಸ... ನಿಮ್ಮೆಲ್ಲರಿಂದಾಗಿ

ದಿನಾಂಕ ೨೪ ನವೆಂಬರ್, ೨೦೧೦ ರ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆಯ ವೆಬ್ಬಾಗಿಲು ಅಂಕಣದಲ್ಲಿ ಭಾವಯಾನದ ಬಗ್ಗೆ ಬಂದಿತ್ತು. ನನಗೆ ಇದೊಂದು ಸಂತಸದ ವಿಷಯ. ಇದೆ ಮೊದಲ ಬಾರಿಗೆ ಪತ್ರಿಕೆಯೊಂದರಲ್ಲಿ ನನ್ನ ಹೆಸರು ಕಾಣಿಸಿಕೊಂಡಿದೆ. ಕೆಲವರಿಗೆ ಇದು ತೀರಾ ಸಿಲ್ಲಿ ವಿಷಯ ಅನ್ನಿಸಬಹುದು. ನನಗೂ ಕೆಲವು ಸಲ ಸಿಲ್ಲಿ ವಿಷಯವಾಗೆ ಕಾಣಿಸಿತ್ತು. ಆದರೂ ನನ್ನ ಚಿತ್ರಗಳು ಹಾಗು ನನ್ನ ಹೆಸರು ಒಂದು ಪತ್ರಿಕೆಯಲ್ಲಿ ಬಂದಿದೆ ಎಂದರೆ ಹೇಳಲಾಗದ ಅನುಭವ ಅಥವಾ ಪ್ರಥಮ ಬಾರಿ ಬಂದಿದ್ದರಿಂದ ಈ ಅನುಭವ. ಬಹುಮಾನ ಬಂದಾಗ ಪುಟ್ಟ ಹುಡುಗನೊಬ್ಬ ಬಹುಮಾನವಾಗಿ ಬಂದ ವಸ್ತುವನ್ನು ಅಕ್ಕಪಕ್ಕದವರಿಗೆಲ್ಲ ತೋರಿಸಿ ಸಂತೋಷ ಪಟ್ಟಂತೆ ಗೆಳೆಯ ಗೆಳತಿಯರಿಗೆಲ್ಲ ಸಂದೇಶ ಕಳಿಸಿ ಸಂಭ್ರಮಿಸಿದ್ದೇನೆ. ಇದು ಯಾವ ಸಾಧನೆಯೂ ಅಲ್ಲವೆಂದು ಗೊತ್ತು. ಆದರೆ ಇದು ಜೀವನದ ಒಂದು ಸಣ್ಣ ಸಂತಸದ ಕ್ಷಣ. ಈ ಸಂತಸಕ್ಕೆ ಕಾರಣರಾದ ಹಾಗು ನನಗೆ ಪ್ರೋತ್ಸಾಹಿಸುತ್ತಾ ತಮ್ಮ ಗೆಳೆತನದ ಒಡಲಲ್ಲಿ ತುಂಬಿಕೊಂಡ ನನ್ನೆಲ್ಲಾ ಸ್ನೇಹಿತ-ಸ್ನೇಹಿತೆಯರು, ಸಹ ಬ್ಲಾಗಿಗರು, ಹಾಗು ನನಗೆ ಒಳ್ಳೆಯದನ್ನು ಬಯಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಹೀಗೆ ಪ್ರೋತ್ಸಾಹಿಸುತ್ತ ನನ್ನ ತಪ್ಪುಗಳನ್ನು ತಿದ್ದುತ್ತಾ ನನ್ನ ನಗುವಿಗೆ ಕಾರಣರಾಗಿರುವಿರೆಂದು ಭಾವಿಸುತ್ತೇನೆ.

ಅಂದ ಹಾಗೆ ಈ ಹಿಂದಿನ ಪೋಸ್ಟ್, ಬ್ಲಾಗಿನಲ್ಲಿ ನನ್ನ ೫೦ ನೇ ಪೋಸ್ಟ್ ಆಗಿತ್ತು. ತಡವಾಗಿ ಗಮನಿಸಿದೆ. ಎರಡೂವರೆ ವರ್ಷಗಳಲ್ಲಿ ೫೦ ಪೋಸ್ಟ್. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಥರ ಆಯಿತು. ಹಲವಾರು ಬಾರಿ ಇಷ್ಟು ದೂರ ಸಾಗುವ ಎಣಿಕೆಯೂ ಇರಲಿಲ್ಲ. ಭಾವಯಾನವನ್ನು ಎಲ್ಲಿಯೂ ನಿಲ್ಲಲು ಕೊಡದೆ ನಿರಂತರವಾಗಿರಲು ಸ್ಫೂರ್ತಿ ಹಾಗು ಪ್ರೋತ್ಸಾಹ ನೀಡಿದ್ದೂ ನೀವೇ. ಹಾಗಾಗಿ ಇನ್ನೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು.








19 comments:

sunaath said...

ವಿಜಯ ಕರ್ನಾಟಕದಲ್ಲಿ ‘ಭಾವಯಾನ’ದ ಕುರಿತು ಲೇಖನವನ್ನು ಅಂದೇ ಓದಿ ಸಂತಸ ಪಟ್ಟಿದ್ದೇನೆ. ನಿಮಗೆ ಅಭಿನಂದನೆಗಳು.

PARAANJAPE K.N. said...

ನಿಮ್ಮ ಖುಷಿಯಲ್ಲಿ ನಾನೂ ಭಾಗಿ. ಅಭಿನ೦ದನೆಗಳು

ಸಾಗರದಾಚೆಯ ಇಂಚರ said...

ನಿಮ್ಮ ಸಂತೋಷದಲ್ಲಿ ನಾನೂ ಭಾಗಿ
ಅಭಿನಂದನೆಗಳು
ಸಾಧನೆ ಹಂಚಿಕೊಳ್ಳುತ್ತಿರಿ

venkat.bhats said...

ನಿಜ ಶರತ್, ಮೊದಲ ಸಲ ನಮ್ಮ ಹೆಸರು ಮೀಡಿಯದಲ್ಲಿ, ಪತ್ರಿಕೆಯಲ್ಲಿ ಬಂದಾಗ ಆಗುವ ಕುಶಿಯ ಮಜವೆ ಬೇರೆ, ಆ ಸಂಭ್ರಮಕ್ಕೆ ಎಣೆ ಇರುವುದಿಲ್ಲ.ಹೇಳಿಕೊಳ್ಳುವ, ಮತ್ತೆ ಮತ್ತೆ ನೋಡಿಕೊಳ್ಳುವ ಕುಶಿ.ಆ ಸಂತಸ ಹೀಗೇ ಮುಂದುವರಿಯಲಿ. ಶುಭ ಹಾರೈಕೆಗಳು.

ಸುಮ said...

ದ್ರಾವಿಡ್ ಬ್ಯಾಟಿಂಗ್ ಆದರೂ ಪರವಾಗಿಲ್ಲ ನಿನ್ನ ಬ್ಲಾಗ್ ಚಟುವಟಿಕೆ ನಿಲ್ಲದಿರಲಿ ಶರತ್ . ಶುಭಾಶಯಗಳು.

Dr.D.T.Krishna Murthy. said...

ನಮ್ಮೆಲ್ಲರ ಹೆಮ್ಮೆಯ ವಿಷಯ.ಅಭಿನಂದನೆಗಳು.

balasubramanya said...

ಲೇಖನ ನಾನು ಓದಿದ್ದೇನೆ ಸಂತಸವಾಯಿತು. ನಿಮಗೆ ಅಭಿನಂದನೆಗಳು .

Ittigecement said...

ABHINANDANEGALU...

ಅಪ್ಪ-ಅಮ್ಮ + ಸಾನ್ವಿ (Appa-Amma + Saanvi) said...

ಶರತ್,

ಪತ್ರಿಕೆಯಲ್ಲಿ ನಿಮ್ಮ ಹೆಸರು ಬಂದದ್ದಕ್ಕೆ ಅಭಿನಂದನೆಗಳ.

All good things in life comes in small packets ಅಂತೆ..ಅದ್ದರಿಂದ ಯಾವುದೂ ಸಿಲ್ಲಿಯಲ್ಲ..

ತುಂಬಾ ಖುಷಿಯಾಯ್ತು..

ಹಾಗೇ ೫೦ನೇ ಪೋಸ್ಟ್‌ಗೆ ಕಂಗ್ರಾಟ್ಸ್ !

V.R.BHAT said...

ಹಾರ್ದಿಕ ಅಭಿನಂದನೆಗಳು

ವಾಣಿಶ್ರೀ ಭಟ್ said...

nimma bagge paper nalli odide.. abhinandane galu

ದೀಪಸ್ಮಿತಾ said...

ಜೀವನದಲ್ಲಿ ಯಾವುದೂ sillyಅಲ್ಲ. ಪತ್ರಿಕೆಯಲ್ಲಿ ನಮ್ಮ ಹೆಸರು, ನಮ್ಮ ಬಗ್ಗೆ ಬಂದಾಗ ಆ ಖುಶಿಯೇ ಬೇರೆ. ಪ್ರತಿ ದಿನವೂ ಬರುವವರಿಗೆ ಏನೂ ಅನ್ನಿಸದಿರಬಹುದು, ಆದರೆ ನಮಗೆ ಅದೇ ದೊಡ್ಡ ವಿಷಯ. ಅಭಿನಂದನೆಗಳು

Rajesh Manjunath - ರಾಜೇಶ್ ಮಂಜುನಾಥ್ said...

Geleya congraaaaatsu...

ಪಾಚು-ಪ್ರಪಂಚ said...

my hearty congrats Sharas :-)

Jyoti Hebbar said...

Chitra nodidkoodle gottaytu... nimmadu anta aavattu paper li..
congrats Sharath..

Datta3 said...

ಸುಮ್ಮನೆ... ಅಲ್ಲಿ ಇಲ್ಲಿ.. ನೋಡುತ್ತಿದ್ದಾಗ.. ಹಾಗೆ ನಿಮ್ಮ ಬ್ಲಾಗ್ ಗೆ ಬಂದೆ...
ಸಂತೋಷ ವಾಯ್ತು..... ಭಾವಯಾನ ನಿಜಕ್ಕೂ ಸುಂದರ....
ಅಭಿನಂದನೆಗಳು ಶರಶ್ಚಂದ್ರ

Datta3 said...

ಸುಮ್ಮನೆ... ಅಲ್ಲಿ ಇಲ್ಲಿ.. ನೋಡುತ್ತಿದ್ದಾಗ.. ಹಾಗೆ ನಿಮ್ಮ ಬ್ಲಾಗ್ ಗೆ ಬಂದೆ...
ಸಂತೋಷ ವಾಯ್ತು..... ಭಾವಯಾನ ನಿಜಕ್ಕೂ ಸುಂದರ....
ಅಭಿನಂದನೆಗಳು ಶರಶ್ಚಂದ್ರ

Pataragitti (ಪಾತರಗಿತ್ತಿ) said...

ಶರತ್,

ಅಭಿನಂದನೆಗಳು..
ನಿಮ್ಮ ಹೆಸರು ಪತ್ರಿಕೆಯಲ್ಲಿ ನೋಡಿ ಸಂತೋಷವಾಯ್ತು.

KalavathiMadhusudan said...

khandita silliyalla,nimma sambhramadalli naavu bahhgiyagiddeve.abhinandanegalu.