ಪರೀಕ್ಷೆ ಸಮಯದಲ್ಲಿ ಬರವಣಿಗೆ ಹಾಗು ಚಿತ್ರಕಲೆ ಮೇಲೆ ಅತೀವ ಆಸಕ್ತಿ ಹುಟ್ಟಿ, ಪರೀಕ್ಷೆ ಇದೆ ಅನ್ನೊ ನೆಪ ಇಟ್ಟುಕೊಂಡು, ಪರೀಕ್ಷೆ ಮುಗಿದ ಮೇಲೆ ದಿನಕ್ಕೊಂದು ಲೇಖನ ಬರೆದರಾಯಿತು, ದಿನ ಒಂದೊಂದು ಚಿತ್ರ ಬಿಡಿಸಿದರಾಯಿತು ಅಂದುಕೊಂಡು ಆಸೆಯನ್ನು ಹತ್ತಿಕ್ಕಲೂ ಆಗದೆ, ಓದಲೂ ಆಗದೆ ಇರುವ ಒಂದು ವಿಚಿತ್ರ ಸ್ಥಿತಿಯಲ್ಲಿ ಪರೀಕ್ಷೆಯನ್ನು ಮುಗಿಸುತ್ತೇನೆ. ಪರೀಕ್ಷೆ ಮುಗಿದ ಮರುದಿನದಿಂದ ನನಗೂ ನನ್ನ ಬ್ಲಾಗ್ ಗೂ ಯಾವುದೇ ಸಂಭಂದ ಇಲ್ಲ ಎನ್ನುವ ಭಾವನೆ ಶುರು ಆಗುತ್ತೆ. ಬರೆಯೋಕೆ ವಿಷಯಗಳಿಲ್ಲ ಎಂದಲ್ಲ. ಈ ರೀತಿ ಯಾಕಾಗುತ್ತೊ ಗೊತ್ತಿಲ್ಲ. ಪ್ರತೀ ರಜೆಯೊ ಹೀಗೆ ಕಳೆದು ಹೋಗೊದನ್ನ ಮೊಕ ಪ್ರೇಕ್ಷಕನಾಗಿ ನೋಡೊ ಹಿಂಸೆ ಸಾಕಾಗಿ ಹೋಗಿದೆ. ಇದರಿಂದ ಹೊರ ಬರುವ ಸಲುವಾಗಿ ಈ ಚಿತ್ರವನ್ನು ಬಿಡಿಸಿದ್ದೇನೆ. ಇದೊಂದು ಅಪೂರ್ಣ ಚಿತ್ರ. ಮುಂದುವರೆಸುವ ಮನಸ್ಸಿಲ್ಲದೆ ಹೊಸ ಪ್ರಯೋಗವೆಂಬ ಹಣೆಪಟ್ಟಿ ಕಟ್ಟಿ ಪೋಸ್ಟ್ ಮಾಡುತ್ತ ಇದ್ದೇನೆ.
5 comments:
ಚಿತ್ರ ತುಂಬಾ ಚನ್ನಾಗಿದೆ... ಹೂ ನಾನು ಬೇರೆ ಬ್ಲಾಗ್ ನಲ್ಲಿ ನೀನು ಬರೆಯದೇ ತುಂಬ ದಿನವಾಯಿತು ಎಂದು ನೆನಪಿಸಿದ್ದೆ ನಿನ್ನ ಪರೀಕ್ಷೆಯ ಸಮಯದಲ್ಲೇ !.. ಊರಿಗೆ ಯಾವಾಗ ಬರುತ್ತಿಯೇ ಆದಷ್ಟು ಬೇಗ ಬುರುತ್ತಿಯೇ ಅಂದುಕೊಳ್ಳಲೇ?
ಚಿತ್ರ ಚೆನ್ನಾಗಿದೆ. ಹಳೆಯ ಬರಹಗಳೂ. ಸಮಯ ಸಿಕ್ಕಿದಾಗ ಪೂರ್ಣಗೊಳಿಸಿ ಮತ್ತೆ ಪೋಸ್ಟ್ ಮಾಡಿ.
ಜೋಮನ್.
ತುಂಬಾ ಕಲಾತ್ಮಕ ಚಿತ್ರ.. ಆದರೆ ಹಣೆಯ ಮೇಲೊಂದು ಕೆಂಪು ಚುಕ್ಕೆ ಇದ್ದಿದ್ದರೆ ಸಂಪೂರ್ಣವಾಗುತ್ತಿತ್ತು!
ಅಪೂರ್ಣವೇ?.. ಆದರೂ ಚೆನ್ನಾಗಿದೆಯಲ್ಲ. ಅಂದ ಹಾಗೆ ಯಾರವಳು?
ಧನ್ಯವಾದಗಳು ಮನಸ್ವಿ, ಜೋಮನ್,ತೇಜಸ್ವಿನಿ, ಹಾಗು ರಾಜೇಶ್ ಅವರೆ ನನ್ನ ಚಿತ್ರ ನೋಡಿ ಕಾಮೆಂಟಿಸಿದ್ದಕ್ಕೆ.
-ತೇಜಸ್ವಿನಿ ಅವರೆ,
ಚಿತ್ರದಲ್ಲಿ ಹಣೆಗೆ ಒಂದು ಬೊಟ್ಟು ಇಟ್ಟಿದ್ದೇನೆ. ಚಿತ್ರ ಸಣ್ಣದಿರುವುದರಿಂದ ಕಾಣುವುದಿಲ್ಲ. ಈ ಚಿತ್ರವನ್ನು ಒಂದು ರಫ್ ಹಾಳೆ ಮೇಲೆ ರಚಿಸಿದ್ದರಿಂದ ಚಿತ್ರ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ.
-ಜೋಮನ್ ಅವರೆ,
ಚಿತ್ರ ಅಪೂರ್ಣವೇ ಉಳಿಯುವುದು :)
-ಮನಸ್ವಿ
ನಿನ್ನನ್ನು ಭೇಟಿ ಆಗದಿದ್ದಕ್ಕೆ ಕ್ಷಮೆ ಇರಲಿ. ಮುಂದಿನ ಬಾರಿ ಖಂಡಿತ ನಿನ್ನನ್ನು ಭೇಟಿಯಾಗುತ್ತೇನೆ.
-ರಾಜೇಶ್ ಅವರೆ,
ಚಿತ್ರದಲ್ಲಿರುವವಳು ಅನಾಮಿಕ ಮಾಡೆಲ್ :)
Post a Comment