ಕತ್ತಲು, ಮಾತಿಲ್ಲದೆ ಮುಗಿದ ಪ್ರೀತಿಯ ನೆನಪಿನ ಹಾಗೆ
ಕಪ್ಪು ಕೋಣೆಯೊಂದರ ಬೀಗ ಕಳೆದುಕೊಂಡ ಬಾಗಿಲ ಹಾಗೆ
ಕತ್ತಲು ಆವರಿಸುತ್ತದೆ ಬೆಳಕಿನ ಮರಣದ ಮರುಘಳಿಗೆಯೇ
ಕತ್ತಲು, ಬಚ್ಚಿಟ್ಟ ನೋವಿಗೆ ಕಣ್ಣೀರು ಒತ್ತರಿಸಿ ಬರುವ ಹಾಗೆ
ಸಂಜೆ ಸೂರ್ಯನನ್ನೇ ನುಂಗುವ ಉನ್ಮತ್ತ ಕಡಲ ಹಾಗೆ
ಬೆಳಕಿನಷ್ಟೇ ಮುಖ್ಯವೆನಿಸುತ್ತದೆ ಈ ಕರಿಕತ್ತಲು
ಸೋತಿಹೆನು ಇಂದು ಈ ಭಯದ ಬಣ್ಣಕ್ಕೆ
ಬೆಳಕು ಬೇಕಿಲ್ಲ ಎನಗೆ
ಕತ್ತಲೇ ತೋರುತಿರುವಾಗ ಹಾದಿಯನು ನನ್ನ ಅಂತರಂಗದೆಡೆಗೆ
5 comments:
ಅಂತರಂಗಕ್ಕೆ ಹೋಗುವ ಹಾದಿಯನು ಕತ್ತಲು ತೋರಿಸಿದರೇನು? ಅಲ್ಲಿ ಗಮ್ಯವಾಗಿ ಬೆಳಕಿರಲಿ, ಅದು ಎಲ್ಲೆಡೆ ಪಸರಿಸಲಿ.
ಶರಚ್ಚಂದ್ರರು ಕತ್ತಲೆಗೆ ಹೆದರುವ ಕಾರಣವೇ ಇಲ್ಲ!
wah superb:)
ಕವನದ ಆಶಯ ತುಂಬಾ ಚೆನ್ನಾಗಿದೆ
ಎಲ್ಲೆಡೆ ಬೆಳಕಿರಲಿ
ಕವನದ ಪ್ರತಿ ಸಾಲು ಸಹ ನಂಗೆ ಇಷ್ಟ ಆತು..ವಿಶೇಷವಾಗಿ ಈ ಸಾಲುಗಳು-
"ಕತ್ತಲು ಆವರಿಸುತ್ತದೆ ಬೆಳಕಿನ ಮರಣದ ಮರುಘಳಿಗೆಯೇ
ಕತ್ತಲು, ಬಚ್ಚಿಟ್ಟ ನೋವಿಗೆ ಕಣ್ಣೀರು ಒತ್ತರಿಸಿ ಬರುವ ಹಾಗೆ
ಸಂಜೆ ಸೂರ್ಯನನ್ನೇ ನುಂಗುವ ಉನ್ಮತ್ತ ಕಡಲ ಹಾಗೆ"
ಇಡಿಯಾಗಿ ಕವನ ತುಂಬಾ ಚನಾಗಿದ್ದು..
Post a Comment