ಹೊರಗೆ ಜಡಿಮಳೆಯ ನರ್ತನ
ಈ ದೊಡ್ಡ ಕಿಟಕಿಯ ಗಾಜಲ್ಲೆಲ್ಲಾ
ಮಣಿಗಳಾಗಿ ಹನಿಗಳು
ಅದರಾಚೆಗೆ ಕತ್ತಲೆಯಲಿ ಮುಳುಗೆಳುತಿಹ ಜಗ
ಆಗಾಗ ಮಿಂಚಿ ಮಾಯವಾಗುತಿಹುದು ಬೆಳಕು
ಮಿಂಚಿನ ಹೆಗಲೇರಿ ಬರುತಿಹುದು ಗುಡುಗೂ
ಇವೆರಡ ರಾಗ-ತಾಳಕ್ಕೆ ಕುಣಿಯುತಿಹನು ವರುಣನು
ತಂಗಾಳಿಯೂ ಜೋತೆಯಾಗಿಹುದು ಈ ಮೂವರೊಂದಿಗೆ
ಮಳೆಹನಿಗಳ ಸ್ಪರ್ಶದಿಂದ ನಸುನಗುವುದು ಜಗವು
ರವಿಯ ಬೆಳಗಿನಲ್ಲಿ ನಲಿನಲಿಯುವುದು
ಮತ್ತೊಂದು ಸುಂದರ ಬೆಳಗನ್ನು ನಿರೀಕ್ಷಿಸುತ್ತ
ನಿದ್ದೆಗೆ ಜಾರಿಕೊಳ್ಳುವೆನು ಹನಿಮಳೆಯ ಕನಸಿನಲ್ಲಿ
3 comments:
ನಿನ್ನೆ ಮೊನ್ನೆಯ ಮಳೆಯ ಅಬ್ಬರ ಚೆನ್ನಾಗಿತ್ತು ಅಲ್ವಾ ಶರತ್? ನಾನಂತೂ ನಮ್ಮ ಬಾಲ್ಕನಿ ಬಿಟ್ಟು ಮಲಗಕ್ಕೆ ಹೋಗಕ್ಕೂ 'ಬೇಡವೇನೋ' ಅಂತ ಕೂತೆ ಇದ್ದೆ ನೋಡು!!
ಒಳ್ಳೆಯ ಕವಿತೆ!
ಏನು ಸರ್ ಊರ ಕಡೆ ಮಳೆ ಆರಂಭವಾಯ್ತೋ ಹೇಗೆ :)
ಕವನದ ಒಳಗಿನ ಆಶಯ ತುಂಬಾ ಇಷ್ಟವಾಯಿತು
Nice one :)
Post a Comment